Top Newsದೇಶ/ವಿದೇಶವೈರಲ್ ನ್ಯೂಸ್ಸುದ್ದಿ

ಕೊರಿಯನ್ ಗೇಮ್ ವ್ಯಸನಕ್ಕೆ ೩ ಬಲಿ; 9ನೇ ಮಹಡಿಯಿಂದ ಹಾರಿದ ಪ್ರಾಣಪಕ್ಷಿ

ಉತ್ತರ ಪ್ರದೇಶ: ಗಾಜಿಯಾಬಾದ್‌ನಲ್ಲಿ ಆನ್‌ಲೈನ್ ಗೇಮಿಂಗ್ ವ್ಯಸನದಿಂದ ಮೂರು ಅಪ್ರಾಪ್ತ ಸಹೋದರಿಯರ ಜೀವ ಬಲಿ ಪಡೆದ ಘಟನೆ ನಡೆದಿದೆ. ಭಾರತ್ ಸಿಟಿ ಸೊಸೈಟಿಯ ಒಂಬತ್ತನೇ ಮಹಡಿಯಿಂದ ಹದಿನಾರರ ಹರೆಯದ ವಿಶಿಕಾ, ಹದಿನಾಲ್ಕರ ಪ್ರಾಯದ ಪ್ರಾಚಿ ಮತ್ತು ಹನ್ನೆರಡು ವರ್ಷದ ಪಖಿ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾರೆ.

ಈ ಸಹೋದರಿಯರು ಕೋವಿಡ್ ಅವಧಿಯಿಂದಲೂ ಕೊರಿಯನ್ ಟಾಸ್ಕ್ ಆಧಾರಿತ ಆನ್‌ಲೈನ್ ಗೇಮ್‌ಗೆ ತೀವ್ರವಾಗಿ ಅಂಟಿಕೊಂಡಿದ್ದರು,ಈ ಗೇಮಿಂಗ್ ಚಟವು ಎಷ್ಟರ ಮಟ್ಟಿಗೆ ಬೆಳೆದಿತ್ತು ಎಂದರೆ, ಈ ಬಾಲಕಿಯರು ಎರಡು ವರ್ಷಗಳ ಹಿಂದೆಯೇ ಶಾಲೆಯನ್ನು ತ್ಯಜಿಸಿದ್ದರು ಮತ್ತು ತಮ್ಮ ಹೆಸರುಗಳನ್ನು ಸಹ ಕೊರಿಯನ್ ಶೈಲಿಯಲ್ಲಿ ಬದಲಾಯಿಸಿಕೊಂಡಿದ್ದರು. ಅವರ ಮಲಗುವ ಕೋಣೆಯ ಗೋಡೆಯ ಮೇಲೆ “ನಾನು ತುಂಬಾ ಒಂಟಿಯಾಗಿದ್ದೇನೆ” ಎಂದು ಬರೆದಿದ್ದರೆ ಹಾಗು ಎಂಟು ಪುಟಗಳ ಡೈರಿಯು ತೀವ್ರತರವಾದ ಮಾನಸಿಕ ಒತ್ತಡ ಮತ್ತು ಏಕಾಂತದ ಭಾವನೆ ಕುರಿತು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಪೋಷಕರು ಅವರ ಮೊಬೈಲ್ ಬಳಕೆಯನ್ನು ನಿರ್ಬಂಧಿಸಿದ್ದು ಮನೆಯೊಳಗೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು ಮತ್ತು ಇದೇ ವಿಷಾದದ ಸಂಗತಿಯು ಅವರನ್ನು ಆತ್ಮಹತ್ಯೆಯಂತಹ ಅಂತಿಮ ನಿರ್ಧಾರಕ್ಕೆ ಪ್ರೇರೇಪಿಸಿದೆ ಎಂದು ಶಂಕಿಸಲಾಗಿದೆ. ಪೋಷಕರು ಮಲಗಿದ್ದ ಸಮಯದಲ್ಲಿ ಬಾಲ್ಕನಿಯಿಂದ ಹಾರಿ ಪ್ರಾಣ ಬಿತ್ತಿದ್ದಾರೆ.

ಗಾಜಿಯಾಬಾದ್ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಬಾಲಕಿಯರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ತನಿಖೆಗೆ ರವಾನಿಸಿದ್ದಾರೆ. ಮಕ್ಕಳ ತಂದೆ ಚೇತನ್ ಕುಮಾರ್ ಅವರು ತನ್ನ ಮಕ್ಕಳನ್ನು ಕೊರಿಯನ್ ಸಂಸ್ಕೃತಿ ಮತ್ತು ಆಟದ ವ್ಯಸನದಿಂದ ಬಿಡಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿರುವುದಕ್ಕೆ ಕಣ್ಣೀರಿಡುತ್ತಿದ್ದಾರೆ. ಡಿಜಿಟಲ್ ವ್ಯಸನದ ಬಗ್ಗೆ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಎಷ್ಟು ಎಚ್ಚರದಿಂದಿರಬೇಕು ಎಂಬ ಗಂಭೀರ ಸಂದೇಶವನ್ನು ರವಾನಿಸಿದೆ.

Comments (0)

Your email address will not be published. Required fields are marked *

Back to top button