Wednesday, February 11, 2026
21.8 C
Bengaluru
Google search engine
LIVE
ಮನೆ#Exclusive NewsTop Newsನಮ್ಮ ಮೆಟ್ರೋ ಇನ್ನು ನಮ್ಮದಲ್ಲ?ಬೆಂಗಳೂರು ಜನರ ಮೇಲೆ ಬಜೆಟ್ ಬರೆ!

ನಮ್ಮ ಮೆಟ್ರೋ ಇನ್ನು ನಮ್ಮದಲ್ಲ?ಬೆಂಗಳೂರು ಜನರ ಮೇಲೆ ಬಜೆಟ್ ಬರೆ!

ಬೆಂಗಳೂರು: ಬೆಂಗಳೂರಿನ ಜೀವನಾಡಿ ಎನಿಸಿಕೊಂಡಿರುವ ‘ನಮ್ಮ ಮೆಟ್ರೋ’ ಸದ್ಯ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊತ್ತಿದ್ದರೂ, ಮತ್ತೊಮ್ಮೆ ದರ ಏರಿಕೆಯ ಬಿಸಿ ಮುಟ್ಟಿಸಲು ಸಜ್ಜಾಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರಾಫಿಕ್ ಜಂಜಾಟದಿಂದ ಬೇಸತ್ತು ಮೆಟ್ರೋ ಮೊರೆ ಹೋಗಿರುವ ಜನರಿಗೆ ಬಿಎಂಆರ್‌ಸಿಎಲ್ ವಾರ್ಷಿಕ ದರ ಪರಿಷ್ಕರಣೆಯ ಹೆಸರಿನಲ್ಲಿ ಶೇಕಡಾ 5 ರಷ್ಟು ದರ ಹೆಚ್ಚಿಸಲು ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ದರ ನಿಗದಿ ಸಮಿತಿಯ ಶಿಫಾರಸ್ಸಿನಂತೆ ಪ್ರತಿ ವರ್ಷ ಫೆಬ್ರವರಿಯಲ್ಲಿ ಸ್ವಯಂಚಾಲಿತವಾಗಿ ದರ ಏರಿಕೆ ಮಾಡಲು ಅಧಿಕಾರಿಗಳು ಪಟ್ಟು ಹಿಡಿದಿದ್ದು, ಈ ಸಂಬಂಧ ನಡೆದ ಬೋರ್ಡ್ ಮೀಟಿಂಗ್‌ನಲ್ಲಿ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕಳೆದ ವರ್ಷವಷ್ಟೇ ಮೆಟ್ರೋ ಟಿಕೆಟ್ ದರವನ್ನು ಬರೋಬ್ಬರಿ ಶೇಕಡಾ 71 ರಷ್ಟು ಹೆಚ್ಚಿಸಲಾಗಿತ್ತು, ಇದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಪ್ರತಿರೋಧಕ್ಕೆ ಸಾಕ್ಷಿಯಾಗಿತ್ತು. ಆಗ ಕನಿಷ್ಠ 10 ರೂಪಾಯಿಯಿಂದ ಗರಿಷ್ಠ ದರ 90 ರೂಪಾಯಿವರೆಗೂ ಏರಿಕೆಯಾಗಿತ್ತು. ಈಗ ಮತ್ತೆ ಶೇಕಡಾ 5 ರಷ್ಟು ಏರಿಕೆ ಮಾಡಿದರೆ, ದೀರ್ಘ ಪ್ರಯಾಣದ ಟಿಕೆಟ್ ದರಗಳು ಇನ್ನಷ್ಟು ದುಬಾರಿಯಾಗಲಿವೆ. ಉದಾಹರಣೆಗೆ, ಪ್ರಸ್ತುತ 80 ರೂಪಾಯಿ ಇರುವ ಟಿಕೆಟ್ ದರ 84 ರೂಪಾಯಿಗೆ ಹಾಗೂ 60 ರೂಪಾಯಿ ಇರುವ ದರ 63 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಈ ವರ್ಷ ದರ ಏರಿಕೆ ಮಾಡದಿದ್ದರೆ ಮುಂದಿನ ವರ್ಷ ಶೇಕಡಾ 10 ರಷ್ಟು ಹೆಚ್ಚಿಸಬೇಕಾಗುತ್ತದೆ ಎಂಬ ವಾದವನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ಸರ್ಕಾರದ ಮುಂದೆ ಇಟ್ಟಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅಧಿಕಾರಿಗಳ ತಪ್ಪು ಲೆಕ್ಕಾಚಾರದಿಂದಾಗಿ ಪ್ರಯಾಣಿಕರ ಮೇಲೆ ಹೊರೆ ಬೀಳುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಮೆಟ್ರೋ ಒಂದು ಸಾರ್ವಜನಿಕ ಸೇವೆಯಾಗಬೇಕೇ ಹೊರತು ಕೇವಲ ಲಾಭದ ಉದ್ದೇಶದ ಸಂಸ್ಥೆಯಾಗಬಾರದು ಎಂಬುದು ವಾದವಾಗಿದೆ. ಪದೇ ಪದೇ ಬೆಲೆ ಏರಿಕೆಯಾದರೆ ಮೆಟ್ರೋ ಸಾಮಾನ್ಯ ಜನರಿಗೆ ನಿಲುಕದ ಐಷಾರಾಮಿ ಸಾರಿಗಿಯಾಗಿ ಬದಲಾಗಬಹುದು ಎಂಬ ಆತಂಕ ಎಲ್ಲೆಡೆ ಮನೆಮಾಡಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments