ಕ್ರೈಂ ಸ್ಟೋರಿಜಿಲ್ಲೆರಾಜ್ಯಸುದ್ದಿ

ಸಂಶಯದ ಬೆನ್ನತ್ತಿದ ಪತಿಯಿಂದ ವಿಕೃತಿ;ಪತ್ನಿಯ ತಲೆ ಬೋಳಿಸಿ ಹಲ್ಲೆ

ಬಾಗಲಕೋಟೆ: ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಕೇವಲ ಸಂಶಯದಿಂದ ವ್ಯಕ್ತಿ ತನ್ನ ಪತ್ನಿಯ ಮೇಲೆ ಕ್ರೂರವಾಗಿ ನಡೆದುಕೊಂಡಿರುವ ಘಟನೆಯಿಂದ ಸಮಾಜ ತಲೆತಗ್ಗಿಸುವಂತಾಗಿದೆ.

ಜನವರಿ 31ರಂದು ರಾತ್ರಿ ಕಬ್ಬಿನ ಗ್ಯಾಂಗ್‌ಮನ್‌ಗೆ ಬುತ್ತಿ ನೀಡಲು ತಡವಾಯಿತು ಎಂಬ ಸಣ್ಣ ಕಾರಣಕ್ಕೆ ಶುರುವಾದ ಜಗಳ, ಪತ್ನಿಯ ಶೀಲದ ಮೇಲಿನ ಸಂಶಯಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಆರೋಪಿ ಉಮೇಶ್ ವಿಕೃತಿಯ ಪರಮಾವಧಿ ಮೆರೆದಿದ್ದು, ಎಲೆಕ್ಟ್ರಿಕ್ ಟ್ರಿಮ್ಮರ್ ಬಳಸಿ ಪತ್ನಿಯ ತಲೆ ಬೋಳಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ.

ಸದ್ಯ ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

Comments (0)

Your email address will not be published. Required fields are marked *

Back to top button