ದೇಶ/ವಿದೇಶರಾಜ್ಯಸುದ್ದಿ

ನಿರ್ಮಾಪಕನ ಕಾರಿನ ಗ್ಲಾಸ್ ಒಡೆದು ಸಿನಿಮಾದ ಹಾರ್ಡ್ ಡಿಸ್ಕ್ ಕದ್ದ ರಾಮ್​ ಜೀ ಗ್ಯಾಂಗ್!

ಬೆಂಗಳೂರು: ನಗರದಲ್ಲಿ ನತ್ತೆ ರಾಮ್​​​​​​​​ ಜೀ ಗ್ಯಾಂಗ್​​​ ಮತ್ತೆ ಆಕ್ಟಿವ್​ ಆಗಿದೆ.. ಕಾರುಗಳ ಕಳ್ಳತನಕ್ಕೆ ಹೆಸರುವಾಸಿಯಾದ ರಾಮ್​ ಜೀ ಗ್ಯಾಂಗ್​​​ ಮತ್ತೆ ಸಕ್ರಿಯವಾಗಿದ್ದು, ವಿಜಯನಗರದಲ್ಲಿ ನಿರ್ಮಾಪಕ ಕಂ ಹೀರೋ ಒಬ್ಬರ ಕಾರಿನ ಗ್ಲಾಸ್​ ಹೊಡೆದು ಸಿನಿಮಾ ಚಿತ್ರೀಕರಣದ ಹಾರ್ಡ್​ ಡಿಸ್ಕ್​​​ ಕಳ್ಳತನ ಮಾಡಿದ್ದಾರೆ..

ನಿರ್ಮಾಪಕ ರವಿಗೌಡ ಕಾರಿನ ಗಾಜು ಪುಡಿ ಮಾಡಿ ಐ ಆಮ್​ ಗಾಡ್​​​​​​ ಚಿತ್ರದ ಶೂಟಿಂಗ್​​​ ಮಾಡಿ ವಿಡಿಯೋ ಇದ್ದ ಹಾರ್ಡ್​​​​​ ಡಿಸ್ಕ್​​​​ ಅನ್ನು ವಿಜಯನಗರದಲ್ಲಿ ಈ ಗ್ಯಾಂಗ್​​​​​​ ಎಸ್ಕೇಪ್​ ಮಾಡಿದ್ದಾರೆ.. ಇನ್ನೇನು ರಿಲೀಸ್ ಆಗಬೇಕಿದ್ದ ಸಿನಿಮಾದ ಹಾರ್ಡ್ ಡಿಸ್ಕ್ ಕಳವು ಮಾಡಿದ್ದು, ಕೂಡಲೇ ವಿಜಯನಗರ ಪೊಲೀಸರಿಗೆ ರವಿಗೌಡ ಮಾಹಿತಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ಅಕ್ಕಪಕ್ಕದ ಸಿಸಿಟಿವಿ ತಪಾಸಣೆ ನಡೆಸಿದಾದ ರಾಮ್ ಜೀ ಗ್ಯಾಂಗ್ ಅನ್ನೋದು ಬೆಳಕಿಗೆ ಬಂದಿದೆ.

ವಿಜಯನಗರದಲ್ಲಿ ಈ ಕಳ್ಳತನ ಘಟನೆ ನಡೆದಿದೆ. ಸಿನಿಮಾ ನಿರ್ಮಾಪಕ ರವಿಗೌಡ ತಮ್ಮ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಶಾಪಿಂಗ್ ಮಾಡಲು ಹೊಗಿದ್ದರು. ಅವರ ಕಾರಿನಲ್ಲಿ ಶೂಟಿಂಗ್ ಮಾಡಿ ವಿಡಿಯೋ ಇದ್ದ ಹಾರ್ಡ್ ಡಿಸ್ಕ್ ಇತ್ತು. ಈ ವೇಳೆ ಕಾರಿನ ಬಳಿ ಬಂದಿದ್ದ ರಾಮ್ ಜೀ ಗ್ಯಾಂಗ್ ಖದೀಮರು ರಿಲೀಸ್ ಆಗಬೇಕಿದ್ದ ಸಿನಿಮಾದ ಹಾರ್ಡ್ ಡಿಸ್ಕ್ ಕದ್ದು ಪರಾರಿಯಾಗಿದ್ದಾರೆ, ಜೊತೆಗೆ ಹಣ, ಒಂದು ಟ್ಯಾಬ್, ಒಂದು ಕಾಸ್ಟ್ಲಿ ಬ್ಯಾಗ್ ಕಳ್ಳತನ ಮಾಡಲಾಗಿದೆ.

ಕೂಡಲೇ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಅಕ್ಕಪಕ್ಕದ ಸಿಸಿಟಿವಿ ತಪಾಸಣೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ನೇರವಾಗಿ ತಮಿಳುನಾಡಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ತಂದೆ ಜಯಶೀಲನ್ ಹಾಗೂ ಆತನ ಮಗ ಕಳ್ಳತನ ಮಾಡಿರೋದು ಗೊತ್ತಾಗಿತ್ತು. ಪೊಲೀಸರು ಆರೋಪಿ ಜಯಶೀಲನ್‌ನನ್ನು ಅರೆಸ್ಟ್ ಮಾಡಿದ್ದಾರೆ. ಜಯಶೀಲನ್ ಮಗ ಎಸ್ಕೇಪ್ ಆಗಿದ್ದಾನೆ.

Comments (0)

Your email address will not be published. Required fields are marked *

Back to top button