Freedom TVTop News

ಇಂದಿನಿಂದ ಅನ್ನಭಾಗ್ಯ ಅಕ್ಕಿ ಸಾಗಾಟ ಲಾರಿ ಬಂದ್​.. ಲಾರಿ ಮಾಲೀಕರ ಮುಷ್ಕರ

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್​​ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಅನ್ನಭಾಗ ಒಂದಾಗಿದೆ. ಅನ್ನಭಾಗ್ಯ ಯೋಜನೆ ಅಕ್ಕಿ ಮುಂದಿನ ತಿಂಗಳಿನಿಂದ ಬಡವರಿಗೆ ಸಿಗುವುದು ಅನುಮಾನವಾಗಿದೆ. ಯಾಕೆಂದರೆ ಅನ್ಯಭಾಗ್ಯ  ಆಹಾರ ಧಾನ್ಯ ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಬಂದ್​ ಮಾಡಲಾಗಿದೆ. ಆಹಾರ ಧಾನ್ಯ ಸಾಗಾಣಿಕೆ ವೆಚ್ಚವನ್ನು ಸರ್ಕಾರ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ಲಾರಿ ಮಾಲೀಕರು ಮುಷ್ಕರ ಆರಂಭಿಸಿದ್ದಾರೆ.

ಲಾರಿ ಮಾಲೀಕರ ಪ್ರಕಾರ ಫೆ.2025ರಿಂದ ಸರ್ಕಾರ ಬಾಡಿಗೆ ಹಣವನ್ನು ಪಾವತಿಸುತ್ತಿಲ್ಲ. ಸುಮಾರು 260 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಇನ್ನು ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗ ಅಕ್ಕಿ ಸಾಗಾಟವನ್ನು ಬಂದ್​ ಮಾಡಲು ನಿರ್ಧರಿಸಲಾಗಿದೆ. ಸರ್ಕಾರ ಬಾಕಿ ಹಣ ಬಿಡುಗಡೆ ಮಾಡುವರಿಗೂ ಅಕ್ಕಿ ಪೂರೈಕೆ ಬಂದ್ ಮಾಡುತ್ತೇವೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button