Top Newsರಾಜ್ಯ

Good News: ಇನ್ಮುಂದೆ ರಜಾ ದಿನಗಳಲ್ಲಿಯೂ ಆಸ್ತಿ ನೋಂದಣಿ..!

ಸಾಮಾನ್ಯವಾಗಿ ಹಲವರು ತಮ್ಮ ಆಸ್ತಿಯನ್ನು ಮಾರಾಟ ಮಾಡಬೇಕಾದಾಗ ಅಥವಾ ಕ್ರಯಕ್ಕೆ ಪಡೆಯಬೇಕಾದಾಗ, ತಮ್ಮ ಕಚೇರಿಗಳಿಗೆ ರಜೆ ಹಾಕಿ ನೋಂದಣಿ ಕಚೇರಿಗೆ ಹೋಗಬೇಕಾಗುತ್ತದೆ.

ಮಾರಾಟಗಾರರು ಮತ್ತು ಖರೀದಿದಾರರು ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕು. ಅಂದು ನೋಂದಣಿಗೆ ಕಚೇರಿಯಲ್ಲಿ ಅವಕಾಶ ಸಿಗಬೇಕು.

ಇದೊಂದು ತಲೆನೋವು ಎಂದುಕೊಂಡವರಿಗೊಂದು ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ರಜಾ ದಿನಗಳಲ್ಲೂ ನೋಂದಣಿ ಕಾರ್ಯ ಪ್ರಾರಂಭಿಸಲಾಗುತ್ತಿದೆ.

ಜೂನ್ 01 ರಿಂದ ಎರಡು ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರಗಳು ನೋಂದಣಿ ಜಿಲ್ಲೆಯ ಒಂದು ಉಪ ನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತದೆ.

ಸಂಬಂಧಿಸಿದ ಜಿಲ್ಲೆಯ ಯಾವುದೇ ತಾಲ್ಲೋಕಿನ ವ್ಯಾಪ್ತಿಯ ಯಾವುದೇ ಸ್ವತ್ತನ್ನು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಯಾವ ಕಚೇರಿ ಯಾವ ರಜಾದಿನದೊಂದು ಕಾರ್ಯನಿರ್ವಹಿಸುತ್ತದೆ ಎಂಬ ವಿವರ ನಿಮಗಾಗಿ ಹಾಗು ನಿಮ್ಮ ಸ್ನೇಹಿತರಿಗಾಗಿ…

Comments (0)

Your email address will not be published. Required fields are marked *

Back to top button