ರಾಜ್ಯ

ಡಿಕೆಶಿ ಮುಂದೆ ಕಣ್ಣೀರಿಟ್ಟ ಸೌಜನ್ಯ ತಾಯಿ – ಡಿಸಿಎಂ ಹೇಳಿದ್ದೇನು..?

ಸೌಜನ್ಯ ಹತ್ಯೆ ಕೇಸ್ ಇದೀಗ ಡಿಸಿಎಂ ಡಿಕೆಶಿ ಅಂಗಳಕ್ಕೆ ತಲುಪಿದೆ. ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಕೇಸ್​​​ನಲ್ಲಿ ನ್ಯಾಯ ಕೊಡಿಸುಸವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸೌಜನ್ಯ ತಾಯಿ ಕುಸುಮಾವತಿ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ನಿನ್ನೆ ಧರ್ಮಸ್ಥಳಕ್ಕೆ ಬಂದಿದ್ದ ಡಿಕೆಶಿಯವರು, ಬಳಿಕ ಗುರುವಾಯನಕೆರೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.  ಈವೇಳೆ ಸೌಜನ್ಯ ತಾಯಿ ಕುಸುಮಾವತಿ ಡಿಕೆಶಿ ಅವರನ್ನ ಭೇಟಿಯಾಗಿ ನನ್ನ ಮಗಳಿಗೆ ನ್ಯಾಯ ಕೊಡಿಸುವಂತೆ ಬೇಡಿಕೊಂಡರು.  13 ವರ್ಷದಿಂದ ನ್ಯಾಯ ಸಿಕ್ಕಿಲ್ಲ ಸಾರ್,  ನೀವೇ ನಮಗೆ ನ್ಯಾಯ ಕೊಡಿಸ್ಬೇಕು ಸರ್ ಎಂದು ಕುಸುಮಾವತಿ ಡಿಸಿಎಂ ಡಿಕೆಶಿ ಮುಂದೆ ಗಳಗಳನೆ ಕಣ್ಅಣೀರಿಟ್ತ್ತಟರು.

ಈ ವೇಳೆ ಸೌಜನ್ಯ ತಾಯಿಗೆ ಡಿಕೆಶಿ ಸಾಂತ್ವನದ ಜೊತೆ ಬುದ್ಧಿಮಾತು ಹೇಳಿದ್ದಾರೆ. ಅಳಲು ಹೋಗಬೇಡಿ ಎಂದು ಸೌಜನ್ಯ ತಾಯಿಗೆ ಸಾಂತ್ವನ ಹೇಳಿದ ಡಿಕೆಶಿ, ಬೇರೆ ಯಾವುದೇ ರಾಜಕೀಯದವರ ಜೊತೆ ಸೇರಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ. ಬಳಿಕ ಹೈಕೋರ್ಟ್ ಆರ್ಡರ್ ತರಿಸಿಕೊಡಿ ಪರಿಶೀಲಿಸ್ತೀನಿ,  ಬೆಂಗಳೂರಿಗೆ ಬಂದು ಕೊಡಿ ಎಂದು ಡಿಸಿಎಂ ಡಿಕೆಶಿ ಸೂಚನೆ ಕೊಟ್ಟಿದ್ದಾರೆ.

https://youtu.be/5_kfUtNhBhg

ಇದೇ ವೇಳೆ  ಡಿಸಿಎಂ ಡಿಕೆ ಶಿವಕುಮಾರ್​ ಎದುರು ಸೌಜನ್ಯ ತಾಯಿ ಜಾತಿ ದಾಳ ಪ್ರಯೋಗಿಸಿದ್ದಾರೆ.  ನಾವೂ ಗೌಡರು, ನೀವು ಗೌಡರು, ನೀವು ಗೌಡ ಸಮುದಾಯಕ್ಕಾಗಿ ಇಲ್ಲಿಗೆ ಬಂದಿದ್ದೀರಿ, ನಮಗೆ ನೀವೇ ನ್ಯಾಯ ಕೊಡಿಸ್ಬೇಕು ಎಂದು ಡಿಸಿಎಂ ಡಿಕೆಶಿ ಮುಂದೆ ಜಾತಿ ದಾಳ ಉರುಳಿಸಿದ್ದಾರೆ.

Comments (0)

Your email address will not be published. Required fields are marked *

Back to top button