ರಾಜ್ಯ
ಕೋಟ್ಯಂತರ ಆಸ್ತಿ ಹೊಂದಿರೋ ಮಂಗಳಮುಖಿಯ ಹ*ತ್ಯೆ

ಬೆಂಗಳೂರಿನಲ್ಲಿ ಆಸ್ತಿಗಾಗಿ ಮಂಗಳಮುಖಿಯ ಭೀಕರ ಕಗ್ಗೊಲೆ ನಡೆದಿದೆ. ಗಾಯತ್ರಿ ಲೇಔಟ್ನಲ್ಲಿ ಕೋಟ್ಯಂತರ ಆಸ್ತಿ ಹೊಂದಿದ್ದ ತನುಶ್ರೀ ಎಂಬಾಕೆಯನ್ನ ಭೀಕರವಾಗಿ ಕೊಲೆ ಮಾಡಲಾಗಿದೆ.. ಮಂಗಳಮುಖಿಯ ಪತಿ ಜಗನ್ನಾಥ್ ಎಂಬುವನಿಂದಲೇ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ಕೃತ್ಯದ ಬಳಿಕ ಆರೋಪಿ ಪತಿ ಜಗನ್ನಾಥ ನಾಪತ್ತೆಯಾಗಿದ್ದಾನೆ. ಮನೆ ಕೆಲಸ ಮಾಡ್ತಿದ್ದ ಮಹಿಳೆಯೂ ಪರಾರಿಯಾಗಿದ್ದಾಳೆ. 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ತನುಶ್ರೀ, ಮಂಗಳಮುಖಿ ಸಮುದಾಯದ ಏಳಿಗೆಗಾಗಿ ಕೆಲಸ ಮಾಡ್ತಿದ್ದರು. ಸಂಗಮ ಹೆಸರಿನ NGO ಕೂಡ ತನುಶ್ರೀ ನಡೆಸುತ್ತಿದ್ರು. ಕೆ.ಆರ್.ಪುರಂ ಪೊಲೀಸರು ತನಿಖೆ ನಡೆಸ್ತಿದ್ದಾರೆ.




