ರಾಜಕೀಯ

ಇಂದು ಲೋಕಸಭೆಯಲ್ಲಿ ವಕ್ಫ್​ ಬಿಲ್​ ಮಂಡನೆ

ನವದೆಹಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ವಕ್ಫ್ ತಿದ್ದುಪಡಿ ವಿಧೇಯಕ ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.

ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಕಿರಣ್‌ ರಿಜಿಜು ವಿಧೇಯಕ ಮಂಡಿಸಿದ್ದಾರೆ. ಚರ್ಚೆಗೆ 8 ಗಂಟೆ ಸಮಯ ನಿಗದಿಪಡಿಸಲಾಗಿದೆ. ಅಗತ್ಯ ಬಿದ್ದರೆ ಸಮಯ ವಿಸ್ತರಿಸುವ ಅವಕಾಶವನ್ನು ಸ್ಪೀಕರ್‌ಗೆ ವಿವೇಚನೆಗೆ ಬಿಡಲಾಗಿದೆ. ರಾಜ್ಯಸಭೆಯಲ್ಲಿ ಗುರುವಾರ ವಿಧೇಯಕ ಮಂಡನೆಯಾಗುವ ಸಾಧ್ಯತೆಗಳಿವೆ.

ವಕ್ಫ್ ಮಸೂದೆಯ ಕುರಿತು ಲೋಕಸಭೆಯಲ್ಲಿ ತನ್ನ ಸಂಸದರಿಗೆ ಆರ್‌ಜೆಡಿ ವಿಪ್ ಜಾರಿ ಮಾಡಿದ್ದು, ವಕ್ಫ್ ಮಸೂದೆಯ ವಿರುದ್ಧ ಮತ ಚಲಾಯಿಸುವಂತೆ ಆರ್‌ಜೆಡಿ ಸಂಸದರಿಗೆ ಸೂಚನೆ ನೀಡಲಾಗಿದೆ. ಇದರ ಮಧ್ಯೆ ಲೋಕಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಇಮ್ರಾನ್ ಮಸೂದ್ ಮತ್ತು ಮೊಹಮ್ಮದ್ ಜಾವೇದ್ ಕೂಡ ಈ ಮಸೂದೆಯ ಕುರಿತು ಮಾತನಾಡುವ ಸಾಧ್ಯತೆ ಇದೆ.

ಇದರ ಮಧ್ಯೆ ಕಾಂಗ್ರೆಸ್​​ ವಕ್ಫ್​ ವಿಲ್​ ಮಂಡನೆಗೆ ತೀವ್ರ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ.

Comments (0)

Your email address will not be published. Required fields are marked *

Back to top button