ಜಿಲ್ಲೆರಾಜಕೀಯರಾಜ್ಯ

ಹೆಬ್ಬಗೋಡಿ ಮೆಟ್ರೋ ಸ್ಟೇಷನ್ಗೆ ‘ಬಯೋಕಾನ್’ ಎಂದು ಹೆಸರಿಸಿರುವುದನ್ನು ವಿರೋಧಿಸಿ ಸ್ಥಳೀಯರ ಪ್ರತಿಭಟನೆ.

ಆನೇಕಲ್ : ಬೆಂಗಳೂರು-ಹೊಸೂರು ಹೆದ್ದಾರಿಯ ಹೆಬ್ಬಗೋಡಿ ಮೇಟ್ರೋ ಸ್ಟೇಷನ್ ಗೆ ಬಯೋಕಾನ್ ಹೆಬ್ಬಗೋಡಿ ಮೆಟ್ರೋ ಸ್ಟೇಷನ್ ಎಂದು ಹೆಸರಿನ ಬೋರ್ಡ್ ಹಾಕುತ್ತಿದ್ದಂತೆ ಸ್ಥಳೀಯರು BMRCL ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಮೆಟ್ರೋ ಈಗಾಗಲೇ ಎರಡು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೂರನೇ ಹಂತದಲ್ಲಿ ಆರ್.ವಿ.ರಸ್ತೆಯಿಂದ, ಸಿಲ್ಕ್ ಬೋರ್ಡ್ ಮುಖಾಂತರ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ ಹಳದಿ ಲೇನ್ ಇದೇ ಮಾರ್ಚ್ ತಿಂಗಳಲ್ಲಿ ಸಂಚಾರ ಆರಂಭಿಸಲಿದೆ ಹೆಬ್ಬಗೋಡಿ ಸಮೀಪದ ಮೆಟ್ರೋ ಸ್ಟೇಷನ್ ಗೆ ಬಯೋಕಾನ್ ಹೆಬ್ಬಗೋಡಿ ನಾಮಫಲಕವನ್ನು ಹಾಕಿದ್ದು ಇದರ ಹೆಸರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿ ಹೆಬ‍ಬಗೋಡಿಯ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಬ್ಬಗೋಡಿ ದ್ವಾರ ಬಾಗಿಲಿನಿಂದ ನೂರಾರು ಸಂಖ್ಯೆಯಲ್ಲಿನ ಸ್ಥಳೀಯ ನಾಗರೀಕರು ಮೆರವಣಿಗೆ ಮೂಲಕ ಹೆಬ್ಬಗೋಡಿ ಮೆಟ್ರೋ ಸ್ಟೇಷನ್ ಬಳಿ ಜಮಾವಣೆಗೊಂಡು BMRCL ಮತ್ತು ಬಯೋಕಾನ್ ವಿರುದ್ದ ಘೋಷಣೆಗಳನ್ನಾಕಿ ಪ್ರತಿಭಟಿಸಿದರು, ಹೆಬ್ಬಗೋಡಿ ಆನೇಕಲ್ ತಾಲ್ಲೂಕಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದು, ನೂರಾರು ವರ್ಷಗಳ ಇತಿಹಾಸವಿರುವ ಗ್ರಾಮದ ಹೆಸರನ್ನ ಅಳಿಸಿ ಹಾಕಲು ಬಯೋಕಾನ್ ಹೆಸರು ಮುಂದೆ ಹಾಕುತ್ತಿದ್ದಾರೆಂದು ಆರೋಪಿಸಿದರು, ನಮಗೆ ಬಯೋಕಾನ್ ಹೆಸರು ಬೇಡ ಕೇವಲ ಹೆಬ್ಬಗೋಡಿ ಮೇಟ್ರೋ ಸ್ಟೇಷನ್ ಎಂದೇ ಬರಬೇಕೆಂದು BMRCLಗೆ ಆಗ್ರಹಿಸಿದರು, ಬಯೋಕಾನ್ ಹೆಸರು ತೆಗೆಯದಿದ್ದಲ್ಲಿ ಹೆಬ್ಬಗೋಡಿಯಲ್ಲೇ ನಿರ್ಮಾಣವಾಗುತ್ತಿರುವ ಮೇಟ್ರೋ ಸರ್ವಿಸ್ ಸ್ಟೇಷನ್ ಕಾರ್ಯನಿರ್ವಹಿಸಲು ಅವಕಾಶ ಕೊಡೋದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಹೆಬ್ಬಗೋಡಿ ನಗರಸಭೆ ಸದಸ್ಯ ಮುನಿಕೃಷ್ಣ, ಅಂಬರೀಶ್ ,ಮಂಜುಳಾ, ಬಿ ಎಸ್ ಪಿ ಪಕ್ಷದ ರಾಜ್ಯ ಖಜಾಂಚಿ ಚಿನ್ನಪ್ಪ ವೈ ಚಿಕ್ಕಹಾಗಡೆ ನೂರಾರು ಜನ ಹೆಬ್ಬಗೋಡಿ ನಿವಾಸಿಗಳು ಭಾಗವಹಿಸಿದ್ದರು.

Comments (0)

Your email address will not be published. Required fields are marked *

Back to top button