Top Newsಸುದ್ದಿ

ಪ್ರಯಾಣಿಕರಿದ್ದ ವಿಮಾನಕ್ಕೆ ಬೆಂಕಿ; ತಪ್ಪಿದ ಭಾರಿ ಅನಾಹುತ

ಅಮೆರಿಕದ ಡೆನ್ವರ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್​ಲೈನ್ಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ

ವಿಮಾನದಲ್ಲಿ ಆರು ಸಿಬ್ಬಂದಿ ಸೇರಿದಂತೆ 178 ಪ್ರಯಾಣಿಕರು ಇದ್ದರು. ಎಲ್ಲರೂ ಸುರಕ್ಷಿತರಾಗಿದ್ದು, 12 ಮಂದಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಲ್ಲಾಸ್​ಗೆ ತೆರಳಬೇಕಿದ್ದ ಅಮೆರಿಕನ್ ಏರ್​ಲೈನ್ಸ್​ನಲ್ಲಿ ಡೆನ್ವ‌ರ್ ವಿಮಾನ ನಿಲ್ದಾಣದ ಸಿ28 ಗೇಟ್ ಪ್ರವೇಶಿಸುತ್ತಿದ್ದಂತೆಯೇ ಬೋಯಿಂಗ್ 737-800 ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಏರ್​ಲೈನ್ಸ್​ಗೆ ಬೆಂಕಿ ಹೊತ್ತಿಕೊಂಡಿರುವ ದೃಶ್ಯ ಹಾಗೂ ಸ್ಥಳಾಂತರಿಸುವ ವಿಡಿಯೋಗಳು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Comments (0)

Your email address will not be published. Required fields are marked *

Back to top button