ರಾಜಕೀಯ
ಕೇಜ್ರಿವಾಲ್ ಶೀಶ್ ಮಹಲ್ ನವೀಕರಣ ಹಗರಣ; ತನಿಖೆಗೆ ಕೇಂದ್ರ ಆದೇಶ

ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ 6 ಫ್ಲ್ಯಾಗ್ಸ್ಟಾಫ್ ರಸ್ತೆಯಲ್ಲಿರುವ ಅಧಿಕೃತ ನಿವಾಸದ ನವೀಕರಣ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಕೇಂದ್ರ ಜಾಗೃತ ಆಯೋಗ ತನಿಖೆಗೆ ಆದೇಶಿಸಿದೆ. ಈ ನವೀಕರಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಸುಮಾರು 40,000 ಚದರ ಅಡಿ ವಿಸ್ತೀರ್ಣದ ಈ ಬಂಗಲೆಯನ್ನು ‘ಶೀಶ್ ಮಹಲ್’ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಗಿ ಕರೆದಿದ್ದಾರೆ. ಈ ಬಂಗಲೆಯನ್ನು ನಿರ್ಮಿಸುವಾಗ ಕಟ್ಟಡ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಅವರು ಸಲ್ಲಿಸಿದ ದೂರಿನ ಮೇರೆಗೆ ಸಿವಿಸಿ ಈ ತನಿಖೆಗೆ ಆದೇಶಿಸಿದೆ.




