Top Newsರಾಜ್ಯಸುದ್ದಿ

ಬಿಎಂಟಿಸಿ ಡ್ರೈವರ್‌, ಕಂಡಕ್ಟರ್‌ ಫೈಟ್‌ – ವಿಡಿಯೋ ವೈರಲ್

ಬೆಂಗಳೂರು: ಬಿಎಂಟಿಸಿ ಕಂಡಕ್ಟರ್ ಮತ್ತು ಚಾಲಕ ಬಸ್ಸನ್ನು ದಾರಿ ಮಧ್ಯೆ ನಿಲ್ಲಿಸಿ ಜಗಳ ಮಾಡಿದ ಘಟನೆ ಹೆಬ್ಬಾಳ ಫ್ಲೈಓವರ್ ಬಳಿ ನಡೆದಿದೆ.

ಬಸ್ಸು ನಿಲ್ಲಿಸಿ ನಿನ್ನ ಮಾತನ್ನು ನಾನ್ಯಾಕೆ ಕೇಳಬೇಕು ಎಂದು ಚಾಲಕ ಮತ್ತು ನಿರ್ವಾಹಕ ಮಧ್ಯೆ ಕಿತ್ತಾಡಿದ್ದಾರೆ. ಇಬ್ಬರು ಜಗಳ ಜೋರಾಗುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ.

ಇಬ್ಬರ ಜಗಳವನ್ನು ಪ್ರಯಾಣಿಕರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಇಬ್ಬರು ಕಿತ್ತಾಟ ನಡೆಸಿದ್ದು ಯಾಕೆ? ಗಲಾಟೆ ನಡೆದಿದ್ದು ಯಾವಾಗ ಎನ್ನುವುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.

Comments (0)

Your email address will not be published. Required fields are marked *

Back to top button