#Exclusive NewsTop Newsಜಿಲ್ಲೆಸುದ್ದಿ

ಚಿಂತಾಮಣಿ : ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶೌಚಾಲಯಕ್ಕೆ ಬೀಗ

ಚಿಂತಾಮಣಿ : ಕೋಲಾರ ಜಿಲ್ಲೆಯ ಚಿಂತಾಮಣಿಯ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ.ಇರುವ ಶೌಚಾಲಯಗಳಿಗೂ ಬೀಗ ಹಾಕಲಾಗಿದೆ. ಆಸ್ಪತ್ರೆಗೆ ಬರುವ  ರೋಗಿಗಳು ಮತ್ತು ರೋಗಿಗಳ ಆರೈಕೆ ಮಾಡಲು ಜೊತೆಗೆ ಬಂದವರು ಶೌಚಾಲಯ ಇಲ್ಲದೆ ಪರದಾಡುವಂತಾಗಿದೆ.

ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿರುವ ಶಸ್ತ್ರ ಚಿಕಿತ್ಸಾ ಕೊಠಡಿ ಮುಂಭಾಗದಲ್ಲಿರುವ ಶೌಚಾಲಯಕ್ಕೆ ಸರಿಯಾದ ಯುಜಿಡಿ ಪೈಪ್ ಲೈನ್ ವ್ಯವಸ್ಥೆ ಇಲ್ಲದ ಕಾರಣ ಬೀಗ ಹಾಕಲಾಗಿದೆ ಎಂದು ಆಡಳಿತಧಿಕಾರಿ ತಿಳಿಸಿದ್ದಾರೆ.

ಇನ್ನು ಇಲ್ಲಿಗೆ ಚಿಕಿತ್ಸೆಗೆ ಬರುವಂತಹ ರೋಗಿಗಳು ಶೌಚಾಲಯಕ್ಕೆ ಹೋಗದಂತಾಗಿದೆ ಎಂದು ರೋಗಿಗಳು ಆರೋಪಿಸಿದರು.ಆಸ್ಪತ್ರೆಯಲ್ಲಿ ಸರಿಯಾಗಿ ನೀರು ಇಲ್ಲ. ರೋಗಿಗಳಿಗೆ ಮತ್ತು ಜೊತೆಗೆ ಬಂದವರಿಗೆ ನೀರಿನ ಅವಶ್ಯವಿದೆ,ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗಳಿಗೆ, ಆಸ್ಪತ್ರೆಯಲ್ಲಿ ಶೌಚಾಲಯಗಳು ಅವಶ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಸಿದ್ದಾರೆ.

Comments (0)

Your email address will not be published. Required fields are marked *

Back to top button