SportsTop Newsಕ್ರಿಕೆಟ್ರಾಜ್ಯಸುದ್ದಿ

WPL Auction 2025: ಬೆಂಗಳೂರಿನಲ್ಲಿ ಇಂದು ಡಬ್ಲ್ಯುಪಿಎಲ್ ಮಿನಿ ಹರಾಜು: 19 ಸ್ಥಾನಕ್ಕೆ 120 ಮಂದಿ ಅದೃಷ್ಟ ಪರೀಕ್ಷೆ

ಬೆಂಗಳೂರು: 2025ರ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(WPL) ಆಟಗಾರ್ತಿಯರ ಮಿನಿ ಹರಾಜು ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ. ಕೇವಲ 19 ಸ್ಥಾನಗಳಿಗೆ ಹರಾಜು ನಡೆಯಲಿದ್ದು, 91 ಭಾರತೀಯರು ಸೇರಿ ಒಟ್ಟು 120 ಮಂದಿ ಅದೃಷ್ಟ ಪರೀಕ್ಷೆ ನಡೆಯಲಿದೆ.

ಕಳೆದ ಬಾರಿ ತಂಡದಲ್ಲಿದ್ದ ಬಹುತೇಕ ಆಟಗಾರ್ತಿಯರನ್ನು ಇತ್ತೀಚೆಗೆ 5 ಫ್ರಾಂಚೈಸಿಗಳು ತನ್ನಲ್ಲೇ ಉಳಿಸಿಕೊಂಡಿದ್ದವು. ಕೆಲವೇ ಕೆಲ ಆಟಗಾರ್ತಿಯರನ್ನು ತಂಡದಿಂದ ಕೈಬಿಡಲಾಗಿದ್ದು, ಆ ಸ್ಥಾನಗಳನ್ನು ಹರಾಜಿನಲ್ಲಿ ಭರ್ತಿ ಮಾಡಲಿದೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ₹3.25 ಕೋಟಿ ಹಣ ಹೊಂದಿದ್ದು, ಹರಾಜಿನಲ್ಲಿ ನಾಲ್ವರು ಆಟಗಾರ್ತಿಯರನ್ನು ಖರೀದಿಸಬೇಕಿದೆ. ಡೆಲ್ಲಿಯ 13 ವರ್ಷದ ಅನ್ಶು ನಾಗರ್‌ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಅತಿ ಕಿರಿಯ ಆಟಗಾರ್ತಿ.

ರಾಜ್ಯದ ನಾಲ್ವರು

ಹರಾಜಿನಲ್ಲಿ ಈ ಬಾರಿ ಕರ್ನಾಟಕದ ನಾಲ್ವರು ಪಾಲ್ಗೊಳ್ಳಲಿದ್ದಾರೆ. ಶುಭಾ ಸತೀಶ್‌, ಪ್ರತ್ಯುಷಾ ಸಿ., ಪ್ರತ್ಯೂಷಾ ಕುಮಾರ್‌ ಹಾಗೂ ನಿಕಿ ಪ್ರಸಾದ್‌ ಹರಾಜಿನಲ್ಲಿ ಅದೃಷ್ಠ ಪರೀಕ್ಷೆಗಿಳಿಯಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಹರಾಜು ನಡೆಯಲಿದ್ದು, ಜಿಯೋ ಸಿನಿಮಾ, ಸ್ಪೋರ್ಟ್ಸ್‌ 18, ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರವಾಗಲಿದೆ.

Comments (0)

Your email address will not be published. Required fields are marked *

Back to top button