#Exclusive NewsTop Newsಕ್ರೈಂ ಸ್ಟೋರಿಜಿಲ್ಲೆರಾಜ್ಯಸುದ್ದಿ
ಸಕ್ಕರೆ ನಾಡಿನಲ್ಲಿ ನೀರಿನ ಟ್ಯಾಂಕ್ಗೆ ನೇಣು ಬಿಗಿದುಕೊಂಡು ಎಂಜಿನಿಯರ್ ಸಾವು….!

ಮಂಡ್ಯ: ಸಕ್ಕರೆ ನಾಡಿನಲ್ಲಿ ನೀರಿನ ಟ್ಯಾಂಕ್ಗೆ ನೇಣು ಬಿಗಿದುಕೊಂಡು ಎಂಜಿನಿಯರ್ ಸೂಸೈಡ್ ಮಾಡಿಕೊಂಡಿದ್ದಾನೆ.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕುರುಬರದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
30 ವರ್ಷದ ಜ್ಞಾನೇಶ್ ಮೃತ ಎಂಜಿನಿಯರ್. ಈತ ಕಳೆದ ಹಲವು ವರ್ಷಗಳಿಂದ ಕೆಸ್ತೂರು ಗ್ರಾಮದಲ್ಲಿ ವಾಸವಾಗಿದ್ದ.ಮೃತ ಜ್ಞಾನೇಶ್ ಶಿಂಷಾ ಏತ ನೀರಾವರಿ ಯೋಜನೆಯಯಲ್ಲಿ ಕಳೆದ 5 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆತ್ಮಹತ್ಯೆಗೂ ಮುನ್ನ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ʼWork Pressureʼ ಎಂದು ಹಾಕಿಕೊಂಡಿದ್ದ.ಈ ಹಿನ್ನೆಲೆ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.




