ಸುದ್ದಿ

ಶ್ರೀಗಂಧ ಚೋರ ಪೊಲೀಸರ ಅತಿಥಿ..!

ಆನೇಕಲ್ ಕಾಡಿನಲ್ಲಿ ಗಂಧದ ಮರ ಕಡಿಯಲು ಬಂದ ಗ್ಯಾಂಗ್ ಮೇಲೆ ಅರಣ್ಯಾಧಿಕಾರಿಗಳ ತಂಡ ದಾಳಿ ಮಾಡಿದೆ. ದಾಳಿ ವೇಳೆ ಓರ್ವ ಸಿಕ್ಕಿಬಿದ್ದು ಇನ್ನುಳಿದ ಆರು ಮಂದಿ ಪರಾರಿಯಾಗಿದ್ದಾರೆ.

ಸಿಕ್ಕಿಬಿದ್ದವನನ್ನು ತಮಿಳುನಾಡಿನ ಬೇರಿಕಿ ಬಳಿಯ ಸಿಂಗ್ಲಬಲ್ಲಿ ಗೇಟ್ ವಾಸಿ 26 ವರ್ಷದ ಪ್ರಸಾದ್ ಎಂದು ಗುರುತಿಸಲಾಗಿದೆ.
ಅವರೊಂದಿಗೆ ಬಂದಿದ್ದ ಇನ್ನುಳಿದ ಮುನಿಯಪ್ಪ, ಮುರುಗ, ಭೀಮಪ್ಪ, ಪುಟ್ಟಪ್ಪ, ಬೊಮ್ಮಪ್ಪ ಮತ್ತು ವೆಂಕಟೇಶ್ ಎಂದು ವಿಚಾರಣೆಯಲ್ಲಿ ಆರೋಪಿ ಬಾಯ್ಬಿಟ್ಟಿದ್ದಾನೆ.

ಗಂಧದ ಮರಗಳನ್ನು ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಬಷೀರ್ ಎಂಬಾತನಿಗೆ ಮಾರಾಟ ಮಾಡಲಾಗುತಿತ್ತು. 3-4 ತಿಂಗಳ ಹಿಂದೆ ಗಂಧದ ಬೇಟೆಗೆ ಬಂದಿದ್ದು ಬರೀಕೈಲಿ ವಾಪಸ್ಸಾಗಿದ್ದ ಕುರಿತು ತಿಳಿಸಿದ್ದಾನೆ.


ಅಲ್ಲದೆ ಬಸ್ಸಿನಲ್ಲಿ ಕಾಡಿನ ಅಂಚಿಗೆ ಬಂದಿದ್ದು ಈ ಮೊದಲು‌ ಮುನಿಯಪ್ಪ ಎಂಬುವವನು ಕಾಡಿನಲ್ಲಿ ಎಲ್ಲೆಲ್ಲಿ ಗಂಧದ ಮರಗಳಿವೆ ಎಂಬುವುದನ್ನು ತಲಾಷ್ ಮಾಡಿ ಸ್ಕೆಚ್ ರೂಪಿಸುತ್ತಿದ್ದ ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ.

Comments (0)

Your email address will not be published. Required fields are marked *

Back to top button