#Exclusive NewsTop Newsಉಪ ಚುನಾವಣೆರಾಜಕೀಯವಿಶೇಷಸುದ್ದಿ

ವಯನಾಡಿನಲ್ಲಿ ಮೋದಿ ಕರಿತು ರಾಹುಲ್​ ಅಚ್ಚರಿಯ ಹೇಳಿಕೆ !

ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಇದೀಗ ಮೋದಿ ಬಗ್ಗೆ ಮಾತಾಡೋಕೆ ಬೋ‌ರ್ ಆಗುತ್ತೆ’ ಎಂದು ಅಚ್ಚರಿಯ ಹೇಳಿಕೆ ನೀಡಿದ ಪ್ರಸಂಗ ಭಾನುವಾರ ವಯನಾಡಿನಲ್ಲಿ ನಡೆದಿದೆ.  ವಯನಾಡು ಲೋಕಸಭೆಯ ಉಪಚುನಾವಣೆ ಹಿನ್ನೆಲೆ ಭಾನುವಾರ ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರು ಸೇರಿ  ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮೊದಲಿಗೆ ಮಾತನಾಡಿದ ಪ್ರಿಯಾಂಕಾ, ‘ಜನಸಾಮಾನ್ಯ ಬದಲಾಗಿ ದೊಡ್ಡ ಉದ್ಯಮಿಗಳ ಹಿತಾಸಕ್ತಿ ಕಾಯುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ಬಳಿಕ ಮಾತು ಆರಂಭಿಸಿದ ರಾಹುಲ್, ‘ಇಂದು ನನ್ನ ಮುಂದೆ 2 ಆಯ್ಕೆ ಇದೆ. ಒಂದು ರಾಜಕೀಯ ಭಾಷಣ, ಇನ್ನೊಂದು ನನ್ನ ಕುಟುಂಬದ ಬಗ್ಗೆ ಮಾತು. ನಾನು 2ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಈಗಾಗಲೇ ಪ್ರಿಯಾಂಕಾ, ಮೋದಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾವೆಲ್ಲಾ ಅವರ ಬಗ್ಗೆ ಈಗ ಬೋ‌ರ್ ಆಗಿದ್ದೇವೆ. ಹೀಗಿರುವಾಗ ಮತ್ತೆ ಪ್ರಸ್ತಾಪ ಏಕೆ?’ ಎಂದು ತಾತ್ಸಾರ ಮನೋಭಾವದಿಂದ ಮಾತನಾಡಿದರು.

Comments (0)

Your email address will not be published. Required fields are marked *

Back to top button