Top Newsಸುದ್ದಿ

ತುಂಗಭದ್ರಾ ನದಿಗೆ ನೀರು ಬಿಡುಗಡೆ – ಮುಳುಗಡೆ ಹಂತ ತಲುಪಿದ ಕಂಪ್ಲಿ ಸೇತುವೆ

ಕೊಪ್ಪಳ: ತುಂಗಭದ್ರಾ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದ ಹಿನ್ನೆಲೆ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಬಳಿಯ ಕಂಪ್ಲಿ ಸೇತುವೆ ಮುಳುಗಡೆ ಹಂತ ತಲುಪಿದೆ.

ಸೇತುವೆ ಮುಳುಗಡೆ ಹಂತ ತಲುಪಿದ ಹಿನ್ನೆಲೆ ಸೇತುವೆ ಮೇಲೆ ವಾಹನ ಸವಾರರಿಗೆ ನಿರ್ಬಂಧ ಹೇರಲಾಗಿದೆ. ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಪ್ರವೇಶ ನಿರ್ಬಂಧಿಸಿದ್ದಾರೆ. ಈ ವರ್ಷ ಐದನೆ ಬಾರಿಗೆ ಕಂಪ್ಲಿ ಸೇತುವೆ ಮೇಲೆ ಸಂಚಾರ ನಿರ್ಬಂಧ ಹೇರಲಾಗಿದೆ.

ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗುವುದರಿಂದ ಪ್ರತಿ ಬಾರಿ ಈ ಸೇತುವೆ ಮುಳುಗಡೆಯಾಗುತ್ತದೆ. ಈ ಹಿನ್ನೆಲೆ ಸೇತುವೆ ಮೇಲ್ದರ್ಜೆಗೆ ಏರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸೇತುವೆ ಮುಳುಗಡೆಯಾದರೆ ಜನರು 25 ಕಿ.ಮೀ ಸುತ್ತುವರೆದು ಕಂಪ್ಲಿಗೆ ತೆರಳುತ್ತಾರೆ.

Comments (0)

Your email address will not be published. Required fields are marked *

Back to top button