#Exclusive News

ಮಾಜಿ ಸಚಿವ ಡಾ. ಸುಧಾಕರ್ ಗೆ ಖೆಡ್ಡಾ: ಡಿಕೆ ಅಧ್ಯಕ್ಷತೆಯಲ್ಲಿ ಸಮಿತಿ

ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಇಂದಿನ ಸಂಸದ ಡಾಕ್ಟರ್ ಕೆ ಸುಧಾಕರ್ ವಿರುದ್ಧ ರಾಜ್ಯ ಸರ್ಕಾರ ಸಮರ ಸಾರಿದೆ. ಕೋವಿಡ್ ಹಗರಣದ ಆರೋಪ ಹೊತ್ತಿರುವ ಸಂಸದನ ವಿರುದ್ಧ ತನಿಖೆಗೆ ಈಗ ರಾಜ್ಯ ಸರ್ಕಾರ ಮುಂದಾಗಿದ್ದು ಈ ಸಮಿತಿಯ ಅಧ್ಯಕ್ಷರಾಗಿ ಕೆಪಿಸಿಸಿ ಅಧ್ಯಕ್ಷ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಈ ಸಮಿತಿಯಲ್ಲಿ ರಾಜ್ಯದ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಚಿವರಾದಂತಹ ಸಂತೋಷ್ ಲಾಡ್ ಹಾಗೂ ಶರಣು ಪ್ರಕಾಶ್ ಪಾಟೀಲ್ ಸ್ಥಾನ ಪಡೆದಿದ್ದಾರೆ, ಈ ವಿಚಾರ ಎಲ್ಲಿಗೆ ಹೋಗಿ ನಿಲ್ಲುತ್ತದೆ ಆದರೆ ಮಾತ್ರ ಸಮಿತಿ ರಚನೆಗೆ ಕೀಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆ ವಹಿಸಿರುವುದು ಮಾತ್ರ ಚರ್ಚೆಗೆ ಗ್ರಾಸವಾಗಿದೆ.

ಫ್ರೀಡಂ ಟಿವಿ ಬೆಂಗಳೂರು

Comments (0)

Your email address will not be published. Required fields are marked *

Back to top button