
ನಮ್ಮ ಮೆಟ್ರೋ ಪ್ರಯಾಣ ದರ ಸದ್ಯದಲ್ಲೇ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಇದರ ಭಾಗವಾಗಿ ಈಗಾಗಲೇ ‘ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ’ (ಬಿಎಂಆರ್ ಸಿಎಲ್) ದರ ಪರಿಷ್ಕರಣೆ ಸಮಿತಿ ರಚಿಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿದೆ.
ಸಮಿತಿಗೆ ಅಧ್ಯಕ್ಷರಾಗಿ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ಥರಾಣಿ ನೇಮಕಗೊಂಡಿದ್ದಾರೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತ್ಯೇಂದ್ರ ಪಾಲ್ ಸಿಂಗ್ ಮತ್ತು ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.
‘ದಿ ಫೇರ್ ಪಿಕ್ಷೇಷನ್ ಕಮಿಟಿ’ (ಎಫ್‌ಎಫ್‌ಸಿ) ಸ್ವತಂತ್ರ ಸಂಸ್ಥೆಯಾಗಿದ್ದು ಅರೆ ನ್ಯಾಯಾಂಗ ಅಧಿಕಾರಗಳನ್ನು ಹೊಂದಿದೆ. ಇದನ್ನು ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ-2002ರ ರಚಿಸಲಾಗಿದೆ. ಇದು ಕಾರ್ಯಾಚರಣೆಯ ಖರ್ಚಿನ ವಿವರಗಳನ್ನು ಪಡೆದುಕೊಳ್ಳಲಿದೆ. ಜತೆಗೆ ಪ್ರಯಾಣಿಕರು ಹಾಗೂ ತಜ್ಞರಿಂದಲೂ ಮಾಹಿತಿ ಸಂಗ್ರಹಿಸಲಿದೆ. ಪ್ರಸ್ತುತ ನಮ್ಮ ಮೆಟ್ರೋ 74 ಕಿಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ನಿತ್ಯ 7-8 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ.
ಸದ್ಯ ಎಷ್ಟಿದೆ ದರ?
ಪ್ರಸ್ತುತ ನಮ್ಮ ಮೆಟ್ರೋದಲ್ಲಿ ಕನಿಷ್ಠ ದರ 10 ರೂ. ಹಾಗೂ ಗರಿಷ್ಠ ದರ 60 ರೂ. ಇದೆ. ಸ್ಮಾರ್ಟ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್ ಟಿಕೆಟ್ ಬಳಸುವವರಿಗೆ ಶೇ.5 ರಿಯಾಯಿತಿ ಇದೆ.
ಇ-ಮೇಲ್ ಮೂಲಕ ಅಭಿಪ್ರಾಯ ತಿಳಿಸಿ
ಈ ಹಿಂದೆ 2017ರಲ್ಲಿ ಶೇ.10-15 ದರ ಪರಿಷ್ಕರಣೆ ಮಾಡಿತ್ತು. ಮೆಟ್ರೋ ನಿಮಯಗಳ ಪ್ರಕಾರ ಪ್ರತಿ 2 ವರ್ಷಕ್ಕೊಮ್ಮೆ ದರ ಪರಿಷ್ಕರಣೆ ಮಾಡಬೇಕು. ಇದೀಗ ಮಾರ್ಗ ವಿಸ್ತರಣೆ, ಮೂರು ಕೋಚ್ ಬದಲು ಆರು ಕೋಚ್‌ಗಳ ಮೆಟ್ರೋ ಓಡಾಟದಿಂದ ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಈ ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್ ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಲಹೆಗಳನ್ನು 21ರ ಒಳಗೆ ಇಮೇಲ್ ಮೂಲಕ ffc@bmrc.co.in ಅಥವಾ ಬಿಎಂಆರ್‌ಸಿಎಲ್ ಕೇಂದ್ರ ಕಚೇರಿಗೆ ಅಂಚೆ ಮೂಲಕ ಕಳುಹಿಸಬಹುದು. ລລ . 15-25 ಏರಿಕೆ ನಿರೀಕ್ಷಿಸಿದೆ ಎನ್ನಲಾಗಿದೆ




