#Exclusive NewsTop Newsಫ್ರೀಡಂ ಟಿವಿ ವಿಶೇಷವಿಶೇಷ

ರೇಣುಕಾಸ್ವಾಮಿ ಕೊಲೆ ಕೇಸ್: ಮೂವರು ಆರೋಪಿಗಳಿಗೆ ಬೇಲ್ ಆದ್ರೂ ಬಿಡುಗಡೆ ಭಾಗ್ಯವಿಲ್ಲ;

ಬೇಲ್ ಸಿಕ್ಕಿದ್ರು, ಇನ್ನೂ  ಬಿಡುಗಡೆ ಭಾಗ್ಯ ಇಲ್ಲ.ಶ್ಯೂರಿಟಿಗಾಗಿ ಮೂವರು ಆರೋಪಿಗಳ ಪರದಾಟ.ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ.ದರ್ಶನ್ ಗ್ಯಾಂಗ್ ನ ಮೂವರು ಆರೋಪಿಗಳಿಗೆ ಜಾಮೀನು.ಕಳೆದ ಸೋಮವಾರ ಮಂಜೂರಾಗಿದ್ದ ಜಾಮೀನು.ಕಾರ್ತಿಕ್ ಅಲಿಯಾಸ್ ಕಪ್ಪೆ, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿಗೆ ಜಾಮೀನು.ಹೈಕೋರ್ಟ್ ನಲ್ಲಿ ಜಾಮೀನು ಪಡೆದಿದ್ದ ಕೇಶವಮೂರ್ತಿ.57ನೇ ಸಿಸಿಹೆಚ್ ಕೋರ್ಟ್ ನಲ್ಲಿ ಜಾಮೀನು ಪಡೆದಿದ್ದ ನಿಖಿಲ್ ನಾಯಕ್ ಹಾಗೂ ಕಾರ್ತಿಕ್.ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದ ಕೋರ್ಟ್.ಒಂದು ಲಕ್ಷ ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಸಾಕ್ಷ್ಯಗಳಿಗೆ ಬೆದರಿಕೆ ಹಾಕಬಾರದು.ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಷರತ್ತು.ಅದ್ರೆ ಶ್ಯೂರಿಟಿ ಪೂರೈಸಲಾಗದೆ ಜೈಲಿನಲ್ಲೆ ಇರುವ ಮೂವರು ಆರೋಪಿಗಳು.ಜಾಮೀನು ಮಂಜುರಾದ್ರು, ಶ್ಯೂರಿಟಿ ವ್ಯವಸ್ಥೆಯಾಗದೇ ಪರದಾಟ.ಆರೋಪಿಗಳ ಕಷ್ಟ ಕಾಲದಲ್ಲಿ ಕೈಕೊಟ್ಟ ಇತರರು.ಕೈ ಹಿಡಿಯಬಹುದು ಅನ್ಕೊಂಡಿದ್ದವರಿಂದ ಸಹಾಯಹಸ್ತ ಸಿಗದೆ ಪರದಾಟ.ಹಣದಾಸೆಗಾಗಿ ಕೇಸಲ್ಲಿ ಸಿಲುಕಿ ಜೈಲು ಸೇರಿದ್ದ ಮೂವರು ಆರೋಪಿಗಳು.ಐದೈದು ಲಕ್ಷ ಹಣ ಸಿಗುತ್ತೆ ಅಂತಾ ಕೊಲೆ ಕೇಸ್ ಮೈಮೇಲೆ ಎಳೆದುಕೊಂಡಿದ್ದ ಮೂವರು‌.ತಾವೇ ಕೊಲೆ ಮಾಡಿದ್ದಾಗಿ ಹೇಳಿಕೊಂಡು ಸರೆಂಡರ್ ಆಗಿದ್ದ ಮೂವರು ಆರೋಪಿಗಳು.ನಂತರ ರೇಣುಕಾಸ್ವಾಮಿ ಶವ ಸಾಗಾಟ ಮಾಡಿ ಪೊಲೀಸರಿಗೆ ಸರೆಂಡರ್.ಹಣಕಾಸು ವಿಚಾರವಾಗಿ ಕೊಲೆ ಮಾಡಿದ್ವಿ ಅಂತಾ ಪೊಲೀಸರ ಮುಂದೆ ಸರೆಂಡರ್ ಆಗಿದ್ದರು.ಸಾಕ್ಷ್ಯನಾಶ ಆರೋಪದಡಿ ಮೂವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು.ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು.ಜಾಮೀನು ಸಿಕ್ಕಿದರೂ ಜೈಲಿನಿಂದ ಹೊರಬರಲು ಹೆಣಗಾಟ.ಶ್ಯೂರಿಟಿ ವ್ಯವಸ್ಥೆ ಆಗದೇ ಇನ್ನು ತುಮಕೂರು ಜೈಲಿನಲ್ಲೆ ಇರುವ ಮೂವರು ಆರೋಪಿಗಳು.ಸರೆಂಡರ್ ಆಗಲು ಹೇಳಿದವರು ಇಂದು ಗಪ್ ಚುಪ್.ಸದ್ಯ ವಕೀಲರ ಮೂಲಕ ಶ್ಯೂರಿಟಿ ವ್ಯವಸ್ಥೆ ತಾವೇ ಮಾಡುತ್ತಿರುವ ಆರೋಪಿಗಳು.

Comments (0)

Your email address will not be published. Required fields are marked *

Back to top button