ರಾಜ್ಯವಾಣಿಜ್ಯ

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ; ಕಿಂಟಲ್‌ಗೆ ಎಷ್ಟಿದೆ ಗೊತ್ತಾ..?

ನವದೆಹಲಿ; ಕೆಲ ದಿನಗಳಿಂದ ಕೊಬ್ಬರಿ ಬೆಲೆ ಸಂಪೂರ್ಣ ನೆಲಕಚ್ಚಿತ್ತು. ಆದರೆ ಇದರ ಪರಿಹಾರಕ್ಕಾಗಿ ಕೇಂದ್ರ ಮಧ್ಯೆ ಬಂದು ಕೊಬ್ಬರಿಗೆ ನಿಗಧಿತ ಬೆಲೆ ನೀಡಿದೆ. ದೇಶದಾದ್ಯಂತ ಅನೇಕರು ಕೊಬ್ಬರಿ ಪದಾರ್ಥಗಳಿಗೆ ಅವಲಂಬಿತವಾಗಿರುವುದರಿಂದ ಬೆಲೆ ಕುಸಿತವಾದ್ದರಿಂದ ರೈತರು ನಷ್ಟಕ್ಕೀಡಾಗಿದ್ದರು.

ಇದೀಗ ಕೊಬ್ಬರಿಗೆ 250-300 ರೂ, ಇನ್ನುಳಿದಂತೆ ವಿವಿಧ ಮಾದರಿಯ ಕೊಬ್ಬರಿಗೆ ಕ್ವಿಂಟಲ್‌ಗೆ 11160-12000 ರು.ವರೆಗೂ ನಿಗಧಿಯಾಗಿದೆ.

ವರದಿಗಳ ಪ್ರಕಾರ , ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಹೆಚ್ಚಾಗಿ ಕೊಬ್ಬರಿ ಬೆಳೆಯಲಾಗುತ್ತದೆ ಎನ್ನಲಾಗಿದೆ. ಇನ್ನು ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟದಲ್ಲಿ ಬೆಲೆ ಹೆಚ್ಚಳ ಬಗ್ಗೆ ಚರ್ಚಿಸಲಾಗಿದೆ. ಕರ್ನಾಟಕದಲ್ಲಿ ಬೆಳೆಯುವ ಉಂಡೆ ಕೊಬ್ಬರಿ ಕ್ವಿಂಟಲ್ ಗೆ 250ರೂ ಹೆಚ್ಚಳ ಮಾಡಲಾಗಿದೆ.

ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಉಂಡೆ ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 250 ರೂ ಆದರೆ, ತಮಿಳು ನಾಡು ಹಾಗೂ ಕೇರಳದಲ್ಲಿ ಬೆಳೆಯಲಾಗುವ ಮಿಲ್ಲಿಂಗ್ ಕೊಬ್ಬರಿಗೆ 300 ರೂ ಹೆಚ್ಚು ಮಾಡಲಾಗಿದೆ.

ಉಂಡೆ ಕೊಬ್ಬರಿ, ಹಾಗೂ ಮಿಲ್ಲಿಂಗ್ ಕೊಬ್ಬರಿ ಉಪಯೋಗ ನೋಡೊದಾರೆ,

ಮಿಲ್ಲಿಂಗ್ ಕೊಬ್ಬರಿಯನ್ನು ಎಣ್ಣೆ ತಯಾರಿಕೆಯಲ್ಲಿ ಹಾಗೂ ಉಂಡೆ ಕೊಬ್ಬರಿಯನ್ನು ಆಹಾರ ತಯಾರಿಕೆ‘ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ.ಉಂಡೆ ಕೊಬ್ಬರಿಯನ್ನು ಆಹಾರ ತಯಾರಿಕೆ‘ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುತ್ತದೆ.

Comments (0)

Your email address will not be published. Required fields are marked *

Back to top button