#Exclusive NewsTop News

ವರದಕ್ಷಿಣೆ ಕೊಡಲಿಲ್ಲವೆಂದು ಪತ್ನಿಯನ್ನು ಹೊಡೆದು ಹತ್ಯೆ ಮಾಡಿದ ಪತಿ

ವರದಕ್ಷಿಣೆ ಕೊಡಲಿಲ್ಲ ಎಂದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮದುವೆಯಾಗಿ 2 ವರ್ಷಗಳು ಕಳೆದಿದ್ದವು. ವರದಕ್ಷಿಣೆಗಾಗಿ ಸದಾ ಪೀಡಿಸುತ್ತಿದ್ದ, ರಕ್ಷಾ ಬಂಧನವೆಂದು ತವರಿಗೆ ಹೋಗಿದ್ದ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದು ಹತ್ಯೆ ಮಾಡಿದ್ದಾನೆ.

ವರದಕ್ಷಿಣೆ ಬೇಡಿಕೆಯನ್ನು ಈಡೇರಿಸಲಿಲ್ಲ ಎನ್ನುವ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನು ಪೋಷಕರ ಮನೆಯಿಂದ ಕರೆತಂದು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಆಮ್ರೋಹಾದಲ್ಲಿ ನಡೆದಿದೆ. ಆತ ಟಿವಿಎಸ್ ಅಪಾಚೆ ಹಾಗೂ 3 ಲಕ್ಷ ರೂ. ನಗದು ನೀಡುವಂತೆ ಬೇಡಿಕೆ ಇಟ್ಟಿದ್ದ, ಹೆಣ್ಣಿನ ಮನೆಯವರು ಇದೆಲ್ಲವನ್ನೂ ಕೊಡಲು ವಿಫಲವಾದ ಹಿನ್ನೆಲೆಯಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.

ಬೈಖೇಡ ಗ್ರಾಮದ ಸುಂದರ್ ಎಂಬಾತ ಎರಡು ವರ್ಷಗಳ ಹಿಂದೆ ಮೀನಾ ಎಂಬಾಕೆಯನ್ನು ಮದುವೆಯಾಗಿದ್ದು, ಅಂದಿನಿಂದ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದ. ಈ ವಿಚಾರವಾಗಿ ಆತ ಕಿರುಕುಳ ನೀಡುತ್ತಿದ್ದ ಎಂದು ತಂದೆಗೆ ತಿಳಿಸಿದ್ದಳು.

ರಕ್ಷಾಬಂಧನದಿಂದ ಮೀನಾ ಸೋಹರ್ಕಾದಲ್ಲಿರುವ ತನ್ನ ತಂದೆಯ ಮನೆಯಲ್ಲಿಯೇ ಇದ್ದಳು. ಸುಂದರ್ ಪ್ರತಿದಿನ ಅವಳನ್ನು ಭೇಟಿಯಾಗುತ್ತಿದ್ದ. ಭಾನುವಾರ ರಾತ್ರಿಯೂ ಅವರನ್ನು ಭೇಟಿ ಮಾಡಿ ತನ್ನ ಮನೆಗೆ ಕರೆತಂದಿದ್ದಾನೆ.

 

Comments (0)

Your email address will not be published. Required fields are marked *

Back to top button