Top Newsಸುದ್ದಿ

ಟೀಚರ್ ಇಲ್ಲದೆ ಬಿಇಓ ಕಚೇರಿ ಧರಣಿ ಕುಳಿತ ವಿದ್ಯಾರ್ಥಿಗಳು

ಚಿಕ್ಕಮಗಳೂರು: ತಾಲೂಕಿನ ಹುಲುವತ್ತಿ ಗ್ರಾಮದ ಶಾಲೆಯಲ್ಲಿ ಟೀಚರ್ ಇಲ್ಲದ ಕಾರಣ ವಿದ್ಯಾರ್ಥಿಗಳು ಬಿಇಓ ಕಚೇರಿ ಬಳಿ ಬಂದು ಧರಣಿ ಕುಳಿತ್ತಿದ್ದಾರೆ.

ಮುತ್ತೋಟಿ ಅರಣ್ಯ ವ್ಯಾಪ್ತಿಯಲ್ಲಿರುವ ಹುಲುವತ್ತಿ ಗ್ರಾಮದ ಶಾಲೆಯಲ್ಲಿ 1 ರಿಂದ 5 ನೇ ತರಗತಿಯ 9 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ಧಾರೆ. ಇದ್ದ ಒಬ್ಬ ಟೀಚರ್ ಬೇರೆ ಕಡೆ ವರ್ಗಾವಣೆ ಆಗಿದ್ದಾರೆ. ಇನ್ನೂ ಹೊಸ ಟೀಚರ್ ಬರಲು 15 ದಿನ ಆಗುತ್ತಂತೆ. ಹಾಗಾಗಿ ಟೀಚರ್ ಇಲ್ಲದ ಕಾರಣ ಪೋಷಕರ ಜೊತೆ ವಿದ್ಯಾರ್ಥಿಗಳು ಬಿಇಓ ಕಚೇರಿ ಬಳಿ ಬಂದು ಧರಣಿ ಕುಳಿತ್ತಿದ್ದಾರೆ. ಅಲ್ಲದೇ ಮಕ್ಕಳ ಜೊತೆ ಬಂದ ಪೋಷಕರು, ಹೊಸ ಟೀಚರ್ ಬರುವವರೆಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments (0)

Your email address will not be published. Required fields are marked *

Back to top button