Top Newsಸುದ್ದಿ

ದರ್ಶನ್​ಗೆ ರಾಜಾತಿಥ್ಯ: ಕೊಲೆ ಆರೋಪಿ ದರ್ಶನ್ ಹೊಸ ಜೈಲಿಗೆ ಶಿಫ್ಟ್

ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ಕೊಲೆ ಆರೋಪ ಹೊತ್ತಿರುವ ಕನ್ನಡ ನಟ ದರ್ಶನ್ ತೂಗುದೀಪ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಗುರುವಾರ ಬೆಳಗ್ಗೆ ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಪರಪ್ಪನ ಅಗ್ರಹಾರ ಕಾರಾಗೃಹದ ಹುಲ್ಲುಹಾಸಿನ ಮೇಲೆ ದರ್ಶನ್, ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಕುಳ್ಳ ಸೀನ ಫೋಟೋ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿತ್ತು.

ಮೊನ್ನೆ ಕುಳ್ಳ ಸೀನ ಬರ್ತಡೇ ಫೋಟೋ ವೈರಲ್ ಆಗಿದ್ದು, ಇದು ಏಳು ವರ್ಷಗಳ ಹಿಂದಿನ ಫೋಟೋ ಏಳು ವರ್ಷದ ಹಿಂದೆ ಕೂಡ ಈ ಫೋಟೋ ಸುದ್ದಿಯಾಗಿತ್ತು ಎಂದು ಹೇಳಲಾಗಿದೆ. ಸದ್ಯ ಅದೇ ಸಾಲಿಗೆ ಮತ್ತೊಂದಷ್ಟು ಪೋಟೋಗಳು ಸೇರ್ಪಡೆಯಾಗಿವೆ. ಸದ್ಯ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದು, ಕರೋನ ಕಾಲದ ಒಂದೆರಡು ಜೈಲಿನ ಫೋಟೋಗಳು ಈಗ ಹೊರ ಬಂದಿವೆ. ಬಳ್ಳಾರಿ ಜೈಲಲ್ಲಿ ರೌಡಿಗಳು ಮೊಬೈಲ್ ಯೂಸ್ ಮಾಡ್ತಾರೆ ಅಡಿಗೆಗೆ ಚಿಕನ್ ಮಟನ್ ರೆಡಿ ಮಾಡುವ ಫೋಟೋ ವೈರಲ್ ಆಗಿದೆ. ಇನ್ನೂ ಈ ಫೋಟೋಗಳು ಮೂರ್ನಾಲ್ಕು ವರ್ಷದ ಹಳೆ ಪೋಟೋಗಳು ಎಂದು ಹೇಳಲಾಗಿದೆ. ಫೋಟೋದಲ್ಲಿರುವ ವ್ಯಕ್ತಿಗಳು ಬೇಲ್ ಪಡೆದು ಹೊರ ಹೋಗಿ ವರುಷಗಳೆ ಕಳೆದಿವೆ ಎನ್ನಲಾಗ್ತಿದ್ದು, ಈ ಬಗ್ಗೆಯೂ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

Comments (0)

Your email address will not be published. Required fields are marked *

Back to top button