Freedom TV

ಬಳ್ಳಾರಿ ಜೈಲಿಗೆ ದರ್ಶನ್ ಕೂಲಿಂಗ್​ ಗ್ಲಾಸ್​ನಿಂದ ಗ್ರಾಂಡ್ ಎಂಟ್ರಿ ಹೇಗಿದೆ…!ಫೋಟೋ ಇಲ್ಲಿವೆ

ನಟ ದರ್ಶನ್ ಅವರು ಜೈಲಿಗೆ ಎಂಟ್ರಿ ಕೊಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ಲಭ್ಯ ಆಗಿದೆ. ದರ್ಶನ್ ಜೈಲಿಗೆ ಎಂಟ್ರಿ ಪಡೆಯುವಾಗ ಅವರು ಕೂಲಿಂಗ್ ಗ್ಲಾಸ್ ಧರಿಸಿದ್ದರು. ಜೊತೆಗೆ ಬ್ರ್ಯಾಂಡೆಡ್ ಶರ್ಟ್ ಹಾಕಿದ್ದರು. ಕೈಯಲ್ಲಿ ಕಡಗ ಕೂಡ ಇತ್ತು.

ದರ್ಶನ್ ಜೈಲಿಗೆ ಎಂಟ್ರಿ ಆಗುವಾಗ ಬಿಗಿ ಭದ್ರತೆ ಆಯೋಜನೆ ಮಾಡಲಾಗಿತ್ತು. ಪೊಲೀಸರ ಸಮ್ಮುಖದಲ್ಲಿ ಅವರು ಜೈಲಿನ ಒಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲು ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಬಳ್ಳಾರಿಯಲ್ಲಿ ಜೈಲಿನ ನಿಯಮಗಳನ್ನ ಪಾಲನೆ ಮಾಡಲು ದರ್ಶನ್​ಗೆ ಸೂಚನೆ ನೀಡಲಾಗಿದೆ. ಹೀಗಾಗಿಯೇ ದರ್ಶನ್ ಹಾಕಿದ್ದ ಬೆಳ್ಳಿ ಕಡಗ, ಸನ್​ಗ್ಲಾಸ್, ಕತ್ತಿನಲ್ಲಿ ಹಾಕಿದ್ದ ಮಣಿ ಸರ ಹಾಗೂ ದಾರವನ್ನು ಪೊಲೀಸರು ಬಿಚ್ಚಿಸಿದ್ದಾರೆ.

ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ 9ರವರೆಗೆ ಮುಂದಕ್ಕೆ ಹೋಗಿದೆ. ಹೀಗಾಗಿ, ಅಲ್ಲಿವರೆಗೂ ದರ್ಶನ್ ಬಳ್ಳಾರಿ ಜೈಲಿನಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ. ಆ ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

 

Comments (0)

Your email address will not be published. Required fields are marked *

Back to top button