ಕ್ರಿಕೆಟ್ಸುದ್ದಿ

ವಿಶ್ವಕಪ್ ಸಂಭ್ರಮ – ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ

ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿರುವ ಟೀಮ್ ಇಂಡಿಯಾ ಆಟಗಾರರರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮೋದಿ ಟೀಮ್ ಇಂಡಿಯಾ ನಾಯಕರಿಗೆ ಅಭಿನಂದಿಸಿದ್ದಾರೆ. ಬಳಿಕ ಆಟಗಾರರ ಜೊತೆ ಮಾತುಕತೆ ನಡೆಸಿದ್ದಾರೆ.

ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಬಾರ್ಬಡೋಸ್‍ನಿಂದ ದೆಹಲಿಗೆ ಇಂದು ಬೆಳಗ್ಗೆ ಆಗಮಿಸಿತು. ಐಟಿಸಿ ಮೌರ್ಯ ಹೋಟೆಲಿನಲ್ಲಿ ವಿಶ್ರಾಂತಿ ಪಡೆದ ಬಳಿಕ ಬೆಳಗ್ಗೆ ಪ್ರಧಾನಿ ಅಧಿಕೃತ ನಿವಾಸಕ್ಕೆ ಟೀಂ ಇಂಡಿಯಾ ತೆರಳಿತು. ನಿವಾಸಕ್ಕೆ ಆಗಮಿಸಿದ ತಂಡದ ಸದಸ್ಯರನ್ನು ಮೋದಿ ಅಭಿನಂದಿಸಿದರು.

ಈ ವೇಳೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಆಟಗಾರರ ಬಳಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೋದಿ ಅವರಿಗೆ ಕಪ್‌ ನೀಡಲಾಯಿತು. ಆದರೆ ಮೋದಿ ಅವರು ಕಪ್‌ ಹಿಡಿದುಕೊಳ್ಳದೇ ರೋಹಿತ್‌ ಶರ್ಮಾ ಮತ್ತು ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಕೈಯನ್ನು ಹಿಡಿದುಕೊಂಡು ನಿಂತುಕೊಂಡಿದ್ದು ವಿಶೇಷವಾಗಿತ್ತು.

ಜೂ.29 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ 7 ರನ್ ಗಳ ಜಯ ಸಾಧಿಸಿತು. ಈ ಮೂಲಕ ಭಾರತ 17 ವರ್ಷಗಳ ನಂತರ ಟಿ 20 ವಿಶ್ವಕಪ್‍ನ್ನು ಗೆದ್ದುಕೊಂಡಿತ್ತು.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button