Top Newsರಾಜಕೀಯಸುದ್ದಿ

ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ

ಬರಿ(ಇಟಲಿ): ಜಿ7 ಸಭೆ ಮುಗಿದ ನಂತರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ  ಅವರು ಪ್ರಧಾನಿ ನರೇಂದ್ರ ಮೋದಿ  ಅವರೊಂದಿಗೆ ಸೆಲ್ಫಿ ವಿಡಿಯೋ ಮಾಡಿ  ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ  ಪೋಸ್ಟ್‌ ಮಾಡಿದ್ದು ವೈರಲ್‌ ಆಗಿದೆ.

 ಇಟಲಿಯಲ್ಲಿ ನಡೆದ ಜಿ7 ರಾಷ್ಟ್ರಗಳ ಸಭೆಗೆ ವಿಶೇಷ ಆಹ್ವಾನಿತರಾಗಿ ಮೋದಿ ಹೋಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮೆಲೋನಿ ಅವರು ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ‘Hello From The Melody Team’ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.
ಮೆಲೋನಿ ಅವರು ಮೋದಿ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆ ದುಬೈನಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ನಡೆದಿತ್ತು. ಈ ವೇಳೆ ಮೋದಿ ಮತ್ತು ಮೆಲೋನಿ ಭಾಗವಹಿಸಿದ್ದರು. ಈ ಸಂದರ್ಭದಲ್ಲೂ ಮೆಲೋನಿ ಅವರು ಸೆಲ್ಫಿ ಕ್ಲಿಕ್ಕಿಸಿದ್ದರು.
ಜಿ7 ಸಭೆ ಮುಗಿದ ಬಳಿಕ ಕೊನೆಯಲ್ಲಿ ಎಲ್ಲಾ ದೇಶದ ನಾಯಕರ ಗ್ರೂಪ್‌ ಫೋಟೋ ತೆಗೆಯಲಾಗಿತ್ತು. ಈ ಫೋಟೋದಲ್ಲಿ ಪ್ರಧಾನಿ ಮೋದಿ ಮಧ್ಯದಲ್ಲಿ ನಿಂತಿದ್ದು ವಿಶೇಷವಾಗಿತ್ತು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button