ರಾಜಕೀಯಸುದ್ದಿ

ಅಣ್ಣಾಮಲೈ ಫೋಟೋ ಹಾಕಿ ನಡು ರಸ್ತೆಯಲ್ಲಿ ಮೇಕೆ ತಲೆ ಕತ್ತರಿಸಿ ಸಂಭ್ರಮಿಸಿದ ಡಿಎಂಕೆ ಕಾರ್ಯಕರ್ತರು

ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ DMK ಕಾರ್ಯಕರ್ತರು ಮೇಕೆಯನ್ನು ನಡು ರಸ್ತೆಯಲ್ಲಿ ಕೊಂದು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಣ್ಣಾಮಲೈ ಫೋಟೋ ವನ್ನು ಮೇಕೆ ಕತ್ತಿಗೆ ನೇತು ಹಾಕಿ ನಡು ರಸ್ತೆಗೆ ತಂದು ಒಂದೇ ಏಟಿಗೆ ತಲೆಯನ್ನು ಕತ್ತರಿಸಿ ಡಿಎಂಕೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಫುಲ್‌ ವೈರಲ್‌ ಆಗಿದೆ.

ಬಿಜೆಪಿ ನಾಯಕ ಅಮರ್‌ ಪ್ರಸಾದ್‌ ರೆಡ್ಡಿ ಅವರು ಈ ವಿಡಿಯೋವನ್ನು ಅಪ್ಲೋಡ್‌ ಮಾಡಿ ಮುಖ್ಯಮಂತ್ರಿ ಸ್ಟಾಲಿನ್‌ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಅನಾಗರಿಕ ವರ್ತನೆ ಸ್ವೀಕಾರಾರ್ಹವಲ್ಲ. ದಯವಿಟ್ಟು ನಿಮ್ಮ ಕಾರ್ಯಕರ್ತರಿಗೆ ಮೂಲಭೂತ ಸಭ್ಯತೆಯನ್ನು ಪ್ರದರ್ಶಿಸಿಲು ಹೇಳಿ. ತಮಿಳುನಾಡು ಪೊಲೀಸರು ವೀಕ್ಷಕರಾಗುವ ಬದಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.

ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ 1,18,068 ಮತಗಳ ಅಂತರದಿಂದ ಸೋತಿದ್ದರು. ಡಿಎಂಕೆ ಗಣಪತಿ ರಾಜ್‌ಕುಮಾರ್‌ ಅವರು 5,68,200 ಮತಗಳನ್ನು ಪಡೆದರೆ ಅಣ್ಣಾಮಲೈ 4,50,132 ಮತಗಳನ್ನು ಗಳಿಸಿದ್ದಾರೆ. ಎಐಡಿಎಂಕೆಯ ಸಿಂಗಯ್‌ ಜಿ ರಾಮಚಂದ್ರನ್‌ ಅವರು 2,36,490 ಮತಗಳು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button