ಆರೋಗ್ಯಫ್ರೀಡಂ ಟಿವಿ ವಿಶೇಷಲೈಫ್ ಸ್ಟೈಲ್

ಪೆಪ್ಪರ್ ರೈಸ್

ರುಚಿಕರವಾದ ಪೆಪ್ಪರ್ ರೈಸ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು….

. ಕಾಳು ಮೆಣಸು-1ಚಮಚ

. ಜೀರಿಗೆ-1ಚಮಚ

. ಕರಿಬೇವು-ಅರ್ಧ ಚಮಚ

. ತುಪ್ಪ-2 ಚಮಚ

. ಸಾಸಿವೆ -ಸ್ವಲ್ಪ

. ಉದ್ದಿನ ಬೇಳೆ-ಸ್ವಲ್ಪ

. ಕಡಲೆಬೇಳೆ-ಸ್ವಲ್ಪ

. ಕಡಲೆಕಾಯಿ ಬೀಜ – ಸ್ವಲ್ಪ

. ಗೋಡಂಬಿ-ಸ್ವಲ್ಪ

. ಬೆಳ್ಳುಳ್ಳಿ-ಸಣ್ಣಗೆ ಹೆಚ್ಚಿದ್ದು – ಸ್ವಲ್ಪ

. ಇಂಗು-ಸ್ವಲ್ಪ

. ಹಸಿಮೆಣಸಿನ ಕಾಯಿ – 1-2

. ಬ್ಯಾಡಗಿ ಮೆಣಸಿನಕಾಯಿ-1

. ಈರುಳ್ಳಿ-1[ಸಣ್ಣಗೆ ಹೆಚ್ಚಿದ್ದು ].ಅನ್ನ-ಒಂದು ಬಟ್ಟಲು

. ಉಪ್ಪು0ರುಚುಗೆ ತಕ್ಕಚ್ಟು

. ನಿಂಬೆರಸ-ಅರ್ಧ ಚಮಚ

. ಕೊತ್ತಂಬರಿ ಸೊಪ್ಪು-ಸ್ವಲ್ಪ

ಮಾಡುವ ವಿಧಾನ …

. ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಮೆಣಸು, ಜೀರಿಗೆ ಹಾಗೂ ಕರಿಬೇವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ . ಇದು ತಣ್ಣಗಾದ ಬಳಿಕ ಮಿಕ್ಸಿ ಜಾರ್​ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.

. ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ. ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಕಡಲೆಕಾಯಿ ಬೀಜ , ಗೋಡಂಬಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಬೆಳ್ಳುಳ್ಳಿ, ಇಂಗು,ಹಸಿಮೆಣಸಿನಕಾಯಿ, ಬ್ಯಾಡಗಿ ಮೆಣಸಿನ ಕಾಯಿ ಹಾಕಿ ಕೆಂಪಗೆ ಮಾಡಿಕೊಳ್ಳಿ. ನಂತರ ಈರುಳ್ಳಿಯನ್ನು ಹಾಕಿ ಕೆಂಪಗೆ ಮಾಡಿಕೊಳ್ಳಿ, ಇದೀಗ ಪುಡಿ ಮಾಡಿಕೊಂಡ ಕಾಳುಮೆಣಸಿನ ಮಿಶ್ರಣ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಅನ್ನ , ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಪೆಪ್ಪರ್ ರೈಸ್ ಸವಿಯಲು ಸಿದ್ಧ.

Comments (0)

Your email address will not be published. Required fields are marked *

Back to top button