
ಬೆಂಗಳೂರು: ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯಾಗುತ್ತು. ತಂದೆ ಬಿಜೆಪಿ ಪಕ್ಷವಾದ್ರೆ, ಮಗಳು ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ಇದೀಗ ಅಪ್ಪನ ವಿರುದ್ಧವೇ ನಿಶಾ ಯೋಗೇಶ್ವರ್ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ನಿಶಾ ಯೋಗೇಶ್ವರ್ ಅವರು ತಂದೆಯ ಬಗ್ಗೆ ಬಹಿರಂಗವಾಗಿ ವಾಗ್ದಾಳಿ ನಡೆಸುವ ಮೂಲಕ ಹಲವು ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ತಾನು ಯೋಗೇಶ್ವರ್ ಅವರ ಮೊದಲ ಹೆಂಡತಿ ಮಗಳಾಗಿರುವುದರಿಂದ ಅವರ ಮನೆಯಲ್ಲಿ ಸ್ಥಾನವಿಲ್ಲ, ತನ್ನ ಚಿಕ್ಕಮ್ಮ (ಮಲತಾಯಿ) ಯಾವತ್ತೂ ತನಗೆ ಅಮ್ಮನಾಗಲಿಲ್ಲ, ಅವರು ಬಿಡಿ. ಸಾರ್ವಜನಿಕ ಬದುಕಿನಲ್ಲಿರುವ ತನ್ನ ತಂದೆಯೇ ಆದರ್ಶ ಅಪ್ಪ ಆಗಲಿಲ್ಲ ಅನ್ನುತ್ತಾರೆ. ರಾಮಾಯಣದ ಸೀತೆ 14 ವರ್ಷಗಳ ಕಾಲ ವನವಾಸ ಅನುಭವಿಸಿದರೆ ತಾನು 24 ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದೇನೆ, ತಂದೆಯ ಎರಡನೇ ಹೆಂಡತಿಯ ಮಗ ಯಾವತ್ತೂ ತನ್ನ ಪಾಲಿಗೆ ಭರತನಾಗಲಿಲ್ಲ ಎಂದು ನಿಶಾ ಹೇಳಿದ್ದಾರೆ.
ನಾನು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಂದೆಯ ಪರವಾಗಿಯೇ ಮನೆ ಮನೆಗೆ ತೆರಳಿ ಕೆಲಸ ಮಾಡಿದ್ದೇನೆ. ಜನರ ಒತ್ತಾಯಕ್ಕೆ ಮಣಿದು ತಾನು ಅಪ್ಪನೊಂದಿಗೆ ರಾಜಿ ಮಾಡಿಕೊಡು ಅವರೊಂದಿಗಿರಲು ಹೋದರೆ, ರಪರಪಾಂತ ಹೊಡೆಯುತ್ತಾರೆ, ಆಚೆ ಹೋಗಿ ಭಿಕ್ಷೆಯಾದರರೂ ಬೇಡಿ ಬದುಕಿಕೋ ಮನೆಗೆ ಮಾತ್ರ ಬರಬೇಡ ಅನ್ನುತ್ತಾರೆ ಎಂದು ನಿಶಾ ಹೇಳುತ್ತಾರೆ.

ಯೋಗೇಶ್ವರ್ ಇಲ್ಲವಾದ್ರೆ ನಿಮ್ಮ ಅಸ್ತಿತ್ವ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಬಂದಿದೆ. ನನಗೆ 10 ವರ್ಷ ಇದ್ದಾಗಲೇ ನಮ್ಮ ತಂದೆ ನಮ್ಮಿಂದ ದೂರ ಹೋದರು. ತಂದೆ ದೂರವಾದ 24 ವರ್ಷದ ಬಳಿಕವೂ ಅವರನ್ನು ನೋಡುತ್ತಿದ್ದೇನೆ. ಎಲೆಕ್ಷನ್ ಟೈಮ್ ನಲ್ಲಿ ಕರೆಯುತ್ತಿದ್ದರು. ಮನೆ ಮನೆಗೆ ತೆರಳಿ ತಂದೆ ಯೋಗೇಶ್ವರ್ ಗೆಲುವಿಗೆ ಪ್ರಾರ್ಥನೆ ಮಾಡುತ್ತಿದ್ದೆ. ಆ ಸಮಯದಲ್ಲಿ ಅಪ್ಪನಿಗೆ ನಾನು ಆದರ್ಶ ಮಗಳಾಗಿದೆ. ದೂರವಾದ 24 ವರ್ಷದ ಬಳಿಕ ನನ್ನ ಬಗ್ಗೆ ಯೋಚನೆ ಮಾಡಿದ್ದಕ್ಕೆ ನಾನು ಅವ್ರಿಗೆ ಆದರ್ಶ ಮಗಳಲ್ಲ. ನಾನು ನನ್ನ ತಂದೆ ಹೆಸರು ತೆಗೆದು ಹಾಕಬೇಕು. ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿರುವವರು ಯಾರು ಎಂದು ಗೊತ್ತು. ಕಮೆಂಟ್ ಮಾಡಿರೋರೆಲ್ಲ ತಂದೆ ಹೆಸರು ಹೇಗೆ ತೆಗೆಯೋದು ಅಂತ ಹೇಳಿ ಹೇಳಿದರು.
ತಂದೆ ಹೆಸರನ್ನ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಬರ್ತ್ ಸರ್ಟಿಫಿಕೇಟ್ ನಲ್ಲಿ ಹೆಸರು ಬದಲಾವಣೆ ಮಾಡಬೇಕು. ಹೆಸರು ತೆಗೆದ್ರೆ ಸಿ ಪಿ ಯೋಗೇಶ್ವರ್ ನನ್ನ ತಂದೆ ಅಲ್ಲ ಅನ್ನೋಕೆ ಆಗುತ್ತಾ? ಭಗವಂತನ ಇಚ್ಚೆಯಿಂದ ಯೋಗೇಶ್ವರ್ ಮಗಳಾಗಿ ಹುಟ್ಟಿದ್ದೇನೆ. 24 ವರ್ಷಗಳ ಹಿಂದೆ ಜೀವನದಿಂದಲೇ ತೆಗೆದ್ರಿ. ಈಗ ನನ್ನ ಹೆಸರ ಜೊತೆ ಅವ್ರ ಹೆಸರು ಇರೋದನ್ನ ತಡೆದುಕೊಳ್ಳೋಕೆ ಆಗುತ್ತಿಲ್ಲ. ಪ್ರಪಂಚಕ್ಕೆ ನೀನು ಎಂಥ ಮಗಳು, ನಿಮ್ಮ ತಂದೆ ತಾಯಿ ಅವ್ರನ್ನ ಅರ್ಥ ಮಾಡಿಕೊಳ್ಳೋಕೆ ಆಗುತ್ತಿಲ್ಲ ಅಂತೀರ? ಆದ್ರೆ ನಮ್ಮ ತಂದೆ ತಾಯಿ ಮಾಡುತ್ತಿರೋದು ಸರಿನಾ? ಕಳೆದ 20 ವರ್ಷದಿಂದ ಚಿಕ್ಕಮ್ಮನ ಮಗಳು ನಮ್ಮ ತಂದೆ ಜೊತೆ ಇದ್ದಾಳೆ. ಆದ್ರೆ ಸ್ವಂತ ಮಗಳಾದ ನಾನು ನಮ್ಮ ತಂದೆ ಜೊತೆ ಇರೋಕೆ ಆಗಲ್ಲ ಭಾವಯಕರಾಗಿ ನಿಶಾ ಅವರು ಬೇಸರ ವ್ಯಕ್ತಪಡಿಸಿದರು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com




