ಕುಮಾರಸ್ವಾಮಿ ಎಸ್ಐಟಿಯಂತ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ – ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು: ಸರ್ಕಾರಕ್ಕೆ ಒಂದು ಜವಬ್ದಾರಿ ಇದೆ ಇಂತಹ ಘಟನೆಯನ್ನು ಲೈಟ್ ಆಗಿ ತಗೆದುಕೊಳ್ಳಲು ಆಗಲ್ಲಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೂ ಗೊತ್ತುಅವರು ಮುಖ್ಯಮಂತ್ರಿ ಆಗಿದ್ದವರು ಎಸ್ ಐಟಿ ಯಂತ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರ ನಿವಾಸ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಸಮಧಾನಗೊಳ್ಳೋದು ಇಂತಹ ಸಂದರ್ಭದಲ್ಲಿ ಸಹಜ ನನ್ನ ಮೇಲೂ ಕೋಪಗೊಂಡು ಮಾತಾಡಿದ್ದಾರೆ. ದೇವರಾಜೇ ಗೌಡ ಅರೋಪಕ್ಕೆ ನಾವು ಏನು ಹೇಳೋಕೆ ಆಗಲ್ಲ, ಎಲ್ಲವನ್ನೂ ಎಸ್ ಐಟಿಯವರು ಗಮನಿಸುತ್ತಾರೆ ಪೆನ್ ಡ್ರೈವ್ ಮೂಲ ಎಲ್ಲವನ್ನು ಎಸ್ ಐಟಿ ಗಮನ ಹರಿಸುತ್ತೆ ಎಂದರು
ಅನುಮಾನ ಪಡುವುದು ಬೇಡ ಸರ್ಕಾರ ಸರಿಯಾಗಿ ನಿಭಾಯಿಸುತ್ತಿದೆ ಡಿ.ಕೆ ಶಿವಕುಮಾರ್ ಹಾಗೂ ಸರ್ಕಾರದ ವಿರುದ್ದ ಆರೋಪ ಏನೇ ಇದ್ರೂ ಎಸ್ ಐಟಿ ತನಿಖೆಯಲ್ಲಿ ಗೊತ್ತಾಗುತ್ತದೆ ಇದು ಕಾಂಗ್ರೆಸ್ ಮೈತ್ರಿ ಅವಧಿಯ ವಿಡಿಯೋ ಎಂದು ಪ್ರಧಾನಿ ಹೇಳಿದ್ದಾರೆ ನೋಡೋಣ ಅದು ಯಾವ ಅವಧಿಯಲ್ಲಿ ಆಗಿದ್ದು ಅಂತಾ ಎಸ್ ಐಟಿ ತನಿಖೆ ಯಲ್ಲಿ ಅದೂ ಗೊತ್ತಾಗಲಿದೆ ಒಮ್ಮೆ ತನಿಖೆ ಮುಗಿದ ಮೇಲೆ ಅದು ಪಬ್ಲಿಕ್ ಡೊಮೈನ್ ಗೆ ಬರುತ್ತದೆ ಯಾವುದನ್ನು ಮುಚ್ಚಿಡಲು ಆಗಲ್ಲ ಬ್ಲೂ ಕಾರ್ನರ್ ನೋಟಿಸ್ ಸಿಬಿಐ ಹೊರಡಿಸಿರಬಹುದು ಆದರೆ ನಮಗೆ ಅವರು ಆ ಮಾಹಿತಿ ತಿಳಿಸಲ್ಲ ಎಂದು ಪರಮೇಶ್ವರ್ ಹೇಳಿದರು.




