ವೈರಲ್ ನ್ಯೂಸ್ಸುದ್ದಿ

BMW ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಪುಂಡರ ಅಟ್ಟಹಾಸ

ಉತ್ತರಪ್ರದೇಶ: ನಡುರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿರುವ ಘಟನೆಯೊಂದು ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. BMW ಕಾರಿನಲ್ಲಿ ದಂಪತಿ ಇದ್ದ ಇದ್ದ ಕಾರನ್ನು ಚೇಸ್‌ ಮಾಡಿದ್ದ ಪುಂಡರು ಅಡ್ಡಗಟ್ಟಿ ಪುಂಡಾಟ ಮೆರೆದಿದ್ದಾರೆ. ಘಟನೆ ಸಂಪೂರ್ಣ ದೃಶ್ಯ ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಮೇ 2ರಂದು ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದು, ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರನ್ನು ಏವರ್‌ ಟೇಕ್‌ ಮಾಡಿದ BMW ಕಾರೊಂದು ಏಕಾಏಕಿ ಅಡ್ಡಗಟ್ಟಿತ್ತು. ಅದರಿಂದ ಕೆಲವು ಯುವಕರು ಕೆಳಗಿಳಿದು ಏಕಾಏಕಿ ಕಾರಿನತ್ತ ಬಾಟಲ್‌ಗಳನ್ನು ಎಸೆಯಲು ಶುರುಮಾಡಿದ್ದರು. ಇದರಿಂದ ಭೀತಿಗೊಂಡ ಸಂತ್ರಸ್ತ ಕುಟುಂಬ ಕಾರನ್ನು ಹಿಂದಕ್ಕೆ ತೆಗೆದುಕೊಂಡು ಟರ್ನ್‌ ಮಾಡಿ ವೇಗವಾಗಿ ಕಾರು ಚಲಾಯಿಸಿ ಪಾರಾಗಿದ್ದಾರೆ. ಈ ದೃಶ್ಯ ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೊಲೀಸರ ಮಾಹಿತಿ ಪ್ರಕಾರ ಈ ಘಟನೆ IFSವಿಲ್ಲಾದ ಎದುರು ಇರುವ ನಾಲೆಡ್ಜ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ ಸಮೀಪ ನಡೆದಿದೆ. ತನ್ನ ಕುಟುಂಬದೊಂದಿಗೆ ಮಹಿಳೆ ಚಲಾಯಿಸುತ್ತಿದ್ದ ಕಾರನ್ನು ಚೇಸ್‌ ಮಾಡಿಕೊಂಡು ಬಂದಿದ್ದ ಕಿಡಿಗೇಡಿಗಳು ಏಕಾಏಕಿ ಕಾರನ್ನು ಅಡ್ಡಗಟ್ಟಿ ಬಿಯರ್‌ ಬಾಟಲಿಗಳಿಂದ ದಾಳಿ ನಡೆಸಿದ್ದರು. ಸಂತ್ರಸ್ತರು ಈ ಘಟನೆ ಬಗ್ಗೆ ಕೇಸ್‌ ದಾಖಲಿಸಲು ನಿರಾಕರಿಸಿದ್ದು, ವೈರಲ್‌ ಆಗಿರುವ ವಿಡಿಯೋದ ಆರೋದ ಆಧಾರದಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್‌ ಆದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಹೆಚ್ಚುವರಿ ಡೆಪ್ಯೂಟಿ ಪೊಲೀಸ್‌ ಕಮಿಷನರ್‌ ಅಶೋಕ್‌ ಕುಮಾರ್‌ ಶರ್ಮಾ ಹೇಳಿದ್ದಾರೆ.

 

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

 

 

Comments (0)

Your email address will not be published. Required fields are marked *

Back to top button