ರಾಜ್ಯವೈರಲ್ ನ್ಯೂಸ್ಸುದ್ದಿ

ಅವಧಿ ಮೀರಿದ ಐಸ್ ಕ್ರೀಮ್ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಚನ್ನಪಟ್ಟಣ : ಅವಧಿಗೂ ಮೀರಿದ ಐಸ್ ಕ್ರೀಮ್ ಸೇವಿಸಿ 40 ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ತರಾದ ಘಟನೆ ಚನ್ನಪಟ್ಟಣದ ಟಿಪ್ಪುನಗರ ಮಿಲನ್ ಶಾದಿ ಮಹಲ್ ನಲ್ಲಿ ನಡೆದಿದೆ. ಮಿಲನ್ ಶಾದಿ ಮಹಲ್ ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಕೆಲವರಲ್ಲಿ 80 ಕ್ಕೂ ಅಧಿಕ ಮಂದಿ ಐಸ್ ಕ್ರೀಮ್ ಸೇವಿಸಿದ್ದಾರೆ.

ಈ ಪೈಕಿ ಸುಮಾರು 40 ಮಂದಿಗೆ ಐಸ್ ಕ್ರೀಮ್ ತಿಂದ ಬಳಿಕ ಅರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ತಗೊಂಡಿದ್ದಾರೆ. ಬಳಿಕ ಅಸ್ವಸ್ತರನ್ನು ಚನ್ನಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Comments (0)

Your email address will not be published. Required fields are marked *

Back to top button