ರಾಜಕೀಯಸುದ್ದಿ

ಯದುವೀರ್​ ಒಡೆಯರ್​ ಒಟ್ಟು ಆಸ್ತಿ ಎಷ್ಟು ಗೊತ್ತಾ ?

ಮೈಸೂರು: ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಇಂದು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ತಾಯಿ ಪ್ರಮೋದ ದೇವಿ ಒಡೆಯರ್, ಶಾಸಕ ಶ್ರೀವತ್ಸ ಜೊತೆ ಸೇರಿ ನಾಮಪತ್ರ ಸಲ್ಲಿಸಿದ್ದಾರೆ.

ಉಮೇದುವಾರಿಕೆ ಸಲ್ಲಿಕೆ ವೇಳೆ ಯದುವೀ‌ರ್ ಅವರು ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಯದುವೀರ್ ಒಡೆಯರ್ ಚರಾಸ್ತಿ ಮೌಲ್ಯ 4,99,59,303 ರೂಪಾಯಿ ಇದ್ದು, ಸದ್ಯ ಅವರ ಬಳಿ ಕೈಯಲ್ಲಿ ಕೈಯಲ್ಲಿ ಒಂದು ಲಕ್ಷ ನಗದು, ಎರಡು ಬ್ಯಾಂಕ್ ನ ಖಾತೆಗಳಲ್ಲಿ 23.55 ಲಕ್ಷ ಹಣ, ಒಂದು ಕೋಟಿ ಮೌಲ್ಯದ ವಿವಿಧ ಕಂಪನಿಗಳಲ್ಲಿ ಬಾಂಡ್ ಮತ್ತು ಶೇರುಗಳು, ನಾಲ್ಕು ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಇದೆ ಎಂದು ಘೋಷಿಸಿದ್ದಾರೆ.

ಯದುವೀ‌ರ್ ಬಳಿ ಯಾವುದೇ ಕೃಷಿ ಭೂಮಿ ಹಾಗೂ ಸ್ವಂತ ಮನೆ ಹೊಂದಿಲ್ಲ. ಯಾವ ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕುಗಳಲ್ಲಿ ಸಾಲ ಪಡೆದಿಲ್ಲ. ಯಾವುದೇ ರೀತಿಯ ಆಧಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ. ಯದುವೀ‌ರ್ ಮೇಲೆ ಯಾವ ಪ್ರಕರಣಗಳು ದಾಖಲಾಗಿಲ್ಲ. ಒಟ್ಟು 4.99 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಯದುವೀ‌ರ್ ಯಾವುದೇ ಸ್ಥಿರಾಸ್ತಿ ಇಲ್ಲ.

Comments (0)

Your email address will not be published. Required fields are marked *

Back to top button