ನ್ಯೂ ಇಯರ್ ವೆಲ್ಕಮ್ಗೆ ಪೊಲೀಸ್ ಇಲಾಖೆ ಮೀಟಿಂಗ್..!!

ಬಾರ್ ರೆಸ್ಟೋರೆಂಟ್ಗೆ ಕಠಿಣ ಮಾರ್ಗಸೂಚಿ..!!
ಬೆಂಗಳೂರು : ಹೊಸ ವರ್ಷಾಚರಣೆಗೆ ಬೆಂಗಳೂರು ಪೊಲೀಸ್ ಇಲಾಖೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇನ್ನೂ 15 ದಿನ ಬಾಕಿ ಇರುವಾಗಲೇ ಇಂದು ಹಲವು ಇಲಾಖೆಗಳೊಂದಿಗೆ ಮೀಟಿಂಗ್ ಮಾಡಲಾಗುತ್ತಿದೆ. ಹೊಸವರ್ಷಾಚರಣೆಯ ಮಾರ್ಗಸೂಚಿ ತಯಾರಿಗಾಗಿ ವಿವಿಧ ಇಲಾಖೆಗಳ ಜೊತೆ ಇಂದು ಕಮಿಷನರ್ ಕಚೇರಿಯಲ್ಲಿ ಮಹತ್ವದ ಸಭೆ ನಡಸಲಾಗುತ್ತಿದೆ.

ಪೊಲೀಸ್ ಸಭೆಯಲ್ಲಿ ಯಾರೆಲ್ಲಾ ಭಾಗಿ ..!
ಪೊಲೀಸ್ ಕಮಿಷನರ್ ಬಿ. ದಯಾನಂದ್, ನಗರದ ಎಲ್ಲಾ ಡಿಸಿಪಿಗಳು ಹೆಚ್ಚುವರಿ ಪೊಲೀಸ್ ಆಯುಕ್ತರು, ಸಂಚಾರ ಜಂಟಿ ಆಯುಕ್ತರು ಭಾಗಿ. ಬಿಬಿಎಂಪಿ, ಅಗ್ನಿಶಾಮಕದಳ, ಆರೋಗ್ಯ ಇಲಾಖೆ, ಬೆಸ್ಕಾಂ ಇಲಾಖೆಯವರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಮಾರ್ಗಸೂಚಿ ಬಿಡುಗಡೆ ಸಾಧ್ಯತೆ..!
ಸಭೆ ಬಳಿಕ ಮಾರ್ಗಸೂಚಿಗಳ ಬಿಡುಗಡೆ ಮಾಡಲಿದ್ದು , ಈ ಬಾರಿಯ ಹೊಸ ವರ್ಷಾಚರಣೆ ಹೊಸ ಹೊಸ ಮಾರ್ಗ ಸೂಚಿಗಳನ್ನು ನೀಡಲಿದ್ದಾರೆ.ಇತ್ತೀಚೆಗೆ ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಗಳಲ್ಲಿ ಕಾರ್ಟೂನ್ಗಳ ಬಳಕೆ ಹೆಚ್ಚಾಗಿದ್ದು ಅದರ ಬ್ಯಾನ್ಗೆ ಚಿಂತನೆ ನಡೆಸಲಾಗ್ತಿದೆ.ಜೊತೆಗೆ ಇಡೀ ರಾತ್ರಿ ಪವರ್ ಕಟ್ ಆಗದ ರೀತಿ ಬೆಸ್ಕಾಂಗೆ ತಿಳಿಸಲಾಗುತ್ತೆ. ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಕಠಿಣ ಮಾರ್ಗಸೂಚಿ ನೀಡಲು ನಿರ್ಧಾರಿಸಲಾಗುತ್ತೆ. ..ಕಪಲ್ಸ್ ಗಳಿಗೆ ಪ್ರತ್ಯೇಕ ಮಾರ್ಗ ರಚಿಸೋ ಪ್ಲ್ಯಾನ್ ತಯಾರಿ ಸೇರಿ ಹಲವು ಕಠಿಣ ಕ್ರಮ ತೆಗೆದುಕೊಳ್ಳಲು ತೀರ್ಮಾನ ತೆಗೆದುಕೊಳ್ಳೊ ಸಾಧ್ಯತೆ ಹೆಚ್ಚಾಗಿದೆ.




