ಸುದ್ದಿ
ಲಂಡನ್ನಲ್ಲಿ ಮೃತಪಟ್ಟ ಭಾರತೀಯ PHD ವಿದ್ಯಾರ್ಥಿನಿ

ಲಂಡನ್: ಲಂಡನ್ನಲ್ಲಿ ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ ನೀತಿ ಆಯೋಗದ ಮಾಜಿ ಉದ್ಯೋಗಿ ಅಪಘಾತದಲ್ಲಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ.
ಭಾರತೀಯ ವಿದ್ಯಾರ್ಥಿನಿ ಚೀಸ್ತಾ ಕೊಚಾರ್ (33) ಕಳೆದ ವಾರ ಲಂಡನ್ನ ತನ್ನ ಮನೆ ಕಡೆಗೆ ಸೈಕ್ಲಿಂಗ್ ಮಾಡುತ್ತಿದ್ದಾಗ ಟ್ರಕ್ಗೆ ಸಿಲುಕಿ ಮೃತಪಟ್ಟಿದ್ದಾಳೆ.
NITI ಆಯೋಗದೊಂದಿಗೆ ಈ ಹಿಂದೆ ಕೆಲಸ ಮಾಡಿದ್ದ ಚೀಸ್ತಾ ಕೊಚಾರ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪಿಎಚ್.ಡಿ ವ್ಯಾಸಂಗ ಮಾಡುತ್ತಿದ್ದರು.
ಚೀಸ್ತಾ ಕೊಚಾರ್ NITI ಆಯೋಗದ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ PhD ವ್ಯಾಸಾಂಗಕ್ಕೆ ಹೋಗಿದ್ದರು. ಲಂಡನ್ನಲ್ಲಿ ಸೈಕ್ಲಿಂಗ್ ಮಾಡುವಾಗ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.




