Freedom TV

ನಿರ್ಮಾಣ ಹಂತದ ಕಟ್ಟಡ ಕುಸಿತ : ಇಬ್ಬರು ಸಾವು, ಹಲವರಿಗೆ ಗಾಯ

ಕೋಲ್ಕತ್ತಾ : ದಕ್ಷಿಣ ಕೋಲ್ಕತ್ತಾದ ಮೆಟಿಯಾಬ್ರೂಜ್​ನಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ತಡರಾತ್ರಿ ಕುಸಿದಿದೆ.  ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 15 ಮಂದಿಯನ್ನು ರಕ್ಷಿಸಲಾಗಿದೆ.

ಗಾರ್ಡನ್​ ರೀಚ್​ ಪ್ರದೇಶದ ಹಜಾರಿ ಮೊಲ್ಲಾ ಬಗಾನ್​ನಲ್ಲಿ ಮಧ್ಯರಾತ್ರಿ ಸುಮಾರಿಗೆ ಐದು ಅಂತಸ್ತಿನ ಕಟ್ಟಡ ಕುಸಿದಿದೆ. ಅವಶೇಷಗಳಡಿ ಸಿಲುಕಿ ಬದುಕುಳಿದವರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡ ಕುಸಿಯುವ ಮೊದಲು ಕಾಂಕ್ರೀಟ್​​ ತುಂಡುಗಳು ಬಿದ್ದಿದ್ದವು. ಕಟ್ಟಡ ಕುಸಿದ ತಕ್ಷಣ ಭಾರೀ ಸದ್ದು ಕೇಳಿ ಬಂದಿದೆ. ದಟ್ಟ ಧೂಳು ಆವರಿಸಿತು. ಸಮೀಪ ಇದ್ದ ಗುಡಿಸಲು ಮೇಲೆ ಕಟ್ಟಡದ ಅವಶೇಷಗಳು ಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button