Freedom TV

ಬಾಂಬರ್‌ಗೆಬೋನಿಟ್ಟ NIA:ಕೆಫೆ ಪುನರಾರಂಭ ಭಾರಿ ಭದ್ರತೆ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ರೂವಾರಿ ಎಲ್ಲಿದ್ದಾನೆ?ಈ ಕ್ಷಣದ ವರೆಗೂ ಉತ್ತರ ಸಿಕ್ಕಿಲ್ಲ.ಸಾವಿರಾರು ಸಿಸಿಟಿವಿ ಫುಟೇಜ್ ಪರಿಶೀಲನೆ ,ತನಿಖಾ ಸಂಸ್ಥೆಗಳ ತೀವ್ರ ತಲಾಶ್ ,ಉಗ್ರನನ್ನ ಬೆಂಬಿಡದ ಹಿಂಬಾಲಿಸುತ್ತಿರೋ ಪೊಲೀಸ್ ತಂಡ ,ಆದ್ರೆ ಉಗ್ರ ಮಾತ್ರ ಅಲ್ಲಲ್ಲಿ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸುತ್ತಿದ್ದಾನೆ .ಇನ್ನೂ ಸ್ಫೋಟಕ್ಕೆ ತುತ್ತಾಗಿದ್ದ ರಾಮೇಶ್ವರಂ ಕೆಫೆ ಎಥಾಸ್ಥಿತಿಗೆ ಮರಳಿದ್ದು ಪುನರಾರಂಭಗೊಂಡಿದೆ ,ಆದ್ರೆ ದೊಡ್ಡ ದುರಂತಕ್ಕೆ ಸ್ಕೆಚ್ ಹಾಕಿದ್ದ ಬಾಂಬರ್ ಇನ್ನೂ ಪತ್ತೆಯಾಗಿಲ್ಲ ಅನ್ನೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇಂದಿನಿಂದ ಗ್ರಾಹಕರಿಗೆ ಸೇವೆ ಆರಂಭಿಸಿರುವ ಹಿನ್ನೆಲೆ ರಾಮೇಶ್ವರಂ ಕೆಫೆಯಲ್ಲಿ ಭದ್ರತೆಯನ್ನೂ ಒದಗಿಸಲಾಗಿದೆ . ಬರೋ ಎಲ್ಲ ಗ್ರಾಹಕರನ್ನೂ, ಪರಿಶೀಲನೆ ಮಾಡಿ ಒಳಗೆ ಬಿಡಲಾಗುತ್ತಿದೆ . ಮೆಟಲ್ ಡಿಟೆಕ್ಟರ್ ಅನ್ನೂ ಅಳವಡಿಸಲಾಗಿದೆ . ಈ ಬಗ್ಗೆ ಪ್ರತಿಕ್ರಯಿಸಿರುವ ರಾಮೇಶ್ವರಂ ಕೆಫೆಮಾಲೀಕ ರಾಘವೇಂದ್ರ, ಜನರಈ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸಿದರು , ರಾಮೇಶ್ವರಂ ಕೆಫೆಗೆ ಮೊದಲ ದಿನದಿಂದಲೇ ನೂರಾರು ಜನ ಗ್ರಾಹಕರು ಬರುತ್ತಿದ್ದು ಹೋಟೆಲ್ ಮ್ಯಾನೇಜ್ಮೆಂಟ್ ತಂಡ ಹರುಷ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಫೆಗೆ ಬಾಂಬ್ ಇಟ್ಟ ಬಾಂಬರ್ ಪತ್ತೆಗೆ ಎನ್ಐಎ ಬೋನ್ ಇಟ್ಟು ಕಾಯುತ್ತಿದೆ, ಬಾಂಬರ್ ಬಳ್ಳಾರಿ ಕಡೆ ಹೋಗಿರುವ ಬಗ್ಗೆ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಆತನ ಪತ್ತೆಗೆ ಬಲೆಬೀಸಿದ್ದಾರೆ. ಈ ನಡುವೆ ಬಳ್ಳಾರಿಯಲ್ಲಿ ಬಾಂಬರ್ ಓಡಾಡಿರುವ ನಾಲ್ಕು ಹೊಸ ಸಿಸಿಟಿವಿ ಪೋಟೊಗಳನ್ನ ಎನ್ಐಎ ಅಧಿಕಾರಿಗಳು ರಿಲೀಸ್ ಮಾಡಿದ್ದು ಶಂಕಿತನ ಮಾಹಿತಿ ಸಿಕ್ಕಲ್ಲಿ ಎನ್ಐಎಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button