ಕ್ರೈಂ ಸ್ಟೋರಿಜಿಲ್ಲೆ

15.5ಕೋಟಿ‌ ಮೌಲ್ಯದ ಗಾಂಜಾ ಪತ್ತೆ. ಇಬ್ಬರ ಬಂಧನ

ಬೀದರ್ :ಬೀದರ್ ಹಾಗೂ NCB ಬೆಂಗಳೂರು ಪೊಲೀಸರು ಭರ್ಜರಿ ಜಂಟಿ ಕಾರ್ಯಾಚರಣೆ ಮಾಡಿದ್ದಾರೆ.
ಕರ್ನಾಟಕದ ಮೂಲಕ ಅಕ್ರಮವಾಗಿ ನೆರೆ ರಾಜ್ಯಕ್ಕೆ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಗಾಂಜಾ ಜಪ್ತಿಮಾಡಿದ್ದಾರೆ.
ಸುಮಾರು 15.50 ಕೋಟಿ ಮೌಲ್ಯದ ಅಪಾರ ಪ್ರಮಾಣದ ಗಾಂಜಾ ಸೀಜ್ ಮಾಡಲಾಗಿದೆ.


ಬೀದರ್ ಜಿಲ್ಲೆ ಔರಾದ್ ತಾಲೂಕಿನ ವನಮಾರಪಳ್ಳಿ ಚೆಕ್‌ಪೋಸ್ಟ್‌ನಲ್ಲಿ ಈ ಗಾಂಜಾ ಜಪ್ತಿಮಾಡಲಾಗಿದೆ.
ಒಟ್ಟು 1596 ಕೆಜಿ ಗಾಂಜಾ ಸೀಜ್ ಮಾಡಿದ ಬಿದರ ಪೊಲೀಸರು.ಆಂಧ್ರಪ್ರದೇಶದಿಂದ ಮಹಾರಾಷ್ಟ್ರಕ್ಕೆ ತೆರಳುವಾಗ ಔರಾದ್‌ನ ವನಮಾರಪಳ್ಳಿ ಚೆಕ್‌ಪೋಸ್ಟ್‌ನಲ್ಲಿತಪಾಸಣೆ ವೇಳೆ ಈ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಹುಮನಾಬಾದ್ ಮೂಲದ ಇಬ್ಬರು ಆರೋಪಿಗಳ ಬಂಧನವಾಗಿದ್ದಾರೆ.

ನಾರ್ಕೊಟಿಕ್ ಕ್ರೈಮ್ ಬ್ಯುರೊ (NCB) ಪೊಲೀಸರಿಂದ ಪ್ರಕರಣ ದಾಖಲು.ಮಾಡಿದ್ದಾರೆ
ಪ್ರಮುಖ ಆರೋಪಿ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು. ಸದ್ಯ ಬಂಧಿಸಲ್ಪಟ್ಟಿರುವ ಇಬ್ಬರೂ
ಈ ಹಿಂದೆಯೂ ಅಕ್ರಮ ಗಾಂಜಾ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ಬಂಧಿತರಾಗಿದ್ದ ಆರೋಪಿಗಳಾಗಿದ್ದಾರೆ

Comments (0)

Your email address will not be published. Required fields are marked *

Back to top button