Educationರಾಜಕೀಯ

ಹಿಜಾಬ್ ವಿವಾದ – ಹೆಚ್‌ಡಿಕೆ, ಸುನಿಲ್ ಕುಮಾರ್ ಕೆಂಡಾಮಂಡಲ!

HD kumar swamy and Sunil kumar against hijab issue taken by Congress government

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಧರಿಸಲು ಅವಕಾಶ ನೀಡಿರುವ ವಿಚಾರ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ಅವರು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಿದ್ದುವಿನ ಈ ಧಿಡೀರ್ ನಿರ್ಧಾರಕ್ಕೆ ಹೆಚ್‌ಡಿಕೆ ಆಶ್ಚರ್ಯ!
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಅವರ ಹಿಜಾಬ್ ಮೇಲಿನ ನಿಷೇಧ ಹಿಂತೆಗೆತದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಮೂರು ವರ್ಷ ಎಲ್ಲಿ ಕಳೆದು ಹೋಗಿದ್ರಿ- “ಕಳೆದ ಮೂರು ವರ್ಷಗಳಿಂದ ಹಿಜಾಬ್ ವಿಚಾರದಲ್ಲಿ ಸುಮ್ಮನಿದ್ದ ಕಾಂಗ್ರೆಸ್ ನಾಯಕರು ಈಗ ಎಚ್ಚೆತ್ತುಕೊಂಡಿರುವುದು ಏಕೆ? ಕೇವಲ ಒಂದು ವರ್ಗವನ್ನು ಓಲೈಸಲು ಈ ನಿರ್ಧಾರ ತೆಗೆದುಕೊಂಡಿದ್ದು ಇದು ಓಟ್ ಬ್ಯಾಂಕ್ ರಾಜಕೀಯ” ಎಂದು ಕಿಡಿಕಾರಿದರು.

ಡಿಸೆಂಬರ್ 16ಕ್ಕೆ ಮುಸ್ಲಿಂ ಸಮಾವೇಶ ನಡೆಯಲಿದೆ. ಅಲ್ಲಿ ಹಿನ್ನಡೆಯಾಗಬಹುದು ಎಂಬ ಹೆದರಿಕೆಯಿಂದ ಕಾಂಗ್ರೆಸ್ ಸರ್ಕಾರ ಈ ಆದೇಶ ಹೊರಡಿಸಿದೆ. ದಾವಣಗೆರೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳನ್ನು ನೋಡಿ ಈ ತೀರ್ಮಾನ ತಗೆದುಕೊಂಡಿದ್ದಾರೆ,” ಎಂದು ಹೆಚ್‌ಡಿಕೆ ಲೇವಡಿ ಮಾಡಿದರು.

ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಸರ್ಕಾರ ಹೇಗೆ ತರಾತುರಿಯಲ್ಲಿ ಈ ನಿರ್ಧಾರ ಮಾಡಿತು ಎಂದು ಅವರು ಪ್ರಶ್ನಿಸಿದರು

ಸರ್ಕಾರದ ಪಾಪದ ಕೊಡ ತುಂಬಿದೆ- ಸುನಿಲ್ ಕುಮಾರ್
ಇನ್ನೊಂದೆಡೆ, ಬಿಜೆಪಿ ನಾಯಕ ಸುನಿಲ್ ಕುಮಾರ್ ಮಾತನಾಡಿ, ಸರ್ಕಾರದ ಜನಪ್ರಿಯತೆ ಕುಸಿಯುತ್ತಿರುವುದರಿಂದ ಕಾಂಗ್ರೆಸ್ ಮತ್ತೆ ಕೋಮು ರಾಜಕಾರಣಕ್ಕೆ ಕೈಹಾಕಿದೆ ಎಂದು ಆರೋಪಿಸಿದರು.
“ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ತನ್ನ ಕೈತಪ್ಪಿ ಹೋಗುತ್ತಿರುವ ಓಟು ಬ್ಯಾಂಕನ್ನು ಭದ್ರಪಡಿಸಿಕೊಳ್ಳಲು ಸರ್ಕಾರ ಮತ್ತೆ ಹಿಜಾಬ್ ವಿಚಾರವನ್ನು ಮುನ್ನಲೆಗೆ ತಂದಿದೆ. ಸರ್ಕಾರದ ಪಾಪದ ಕೊಡ ತುಂಬಿದೆ” ಎಂದು ಅವರು ಗುಡುಗಿದರು.

ಕರುನಾಡಲ್ಲಿ ಮತ್ತೆ ‘ಕೇಸರಿ-ಹಿಜಾಬ್’ ಸಂಘರ್ಷ ತಾರಕಕ್ಕೇರಿದೆ. ಸರ್ಕಾರದ ಈ ಅನಿರೀಕ್ಷಿತ ನಿರ್ಧಾರದಿಂದಾಗಿ ರಾಜ್ಯದಲ್ಲಿ ಕೇಸರಿ ಕಲಿಗಳು ಆಕ್ರೋಶಗೊಂಡಿದ್ದು, ವಿದ್ಯಾಕ್ಷೇತ್ರದಲ್ಲಿ ಈ ಆದೇಶ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿಸಿದೆ. ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆಗಳು ನಡೆಸಲು ವಿರೋಧ ಪಕ್ಷಗಳು ಸಜ್ಜಾಗುತ್ತಿವೆ.

#HijabControversy #HDKumaraswamy #Siddaramaiah #CongressVsBJP #KarnatakaPolitics #FreedomTV #VotebankPolitics #SunilKumar #BreakingNews #KarnatakaEducation

Comments (0)

Your email address will not be published. Required fields are marked *

Back to top button