ಹಿಜಾಬ್ ಪರ ಸಿದ್ದರಾಮಯ್ಯ – MLC ಡಾ. ಧನಂಜಯ್ ಸರ್ಜಿ ಆಕ್ರೋಶ!
Dhananjay Sarji against HIjab statement given by Siddaramaiah

ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ನವರು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ಕುರಿತು ಬಿಜೆಪಿ ಎಂಎಲ್‍ಸಿ ಡಾ. ಧನಂಜಯ್ ಸರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಒಡೆದಾಳುವ ನೀತಿಯನ್ನೇ ಅನುಸರಿಸಿಕೊಂಡು ಬಂದಿದೆ” ಎಂದರು. ಹಿಂದೆ ಆಂಗ್ಲರು ಡಿವೈಡ್ ಅಂಡ ರೂಲ್ ಪಾಲಿಸಿ ಆಳ್ವಿಕೆ ನಡೆಸುತ್ತಿದ್ದರು, ಅದೇ ಹಾದಿಯಲ್ಲಿ ಕಾಂಗ್ರೆಸ್ ಮುಂದುವರೆದಿದೆ ಎಂದು ವಾಗ್ದಾಳಿ ನಡೆಸಿದರು.

ಹೈಕೋರ್ಟ್ ಆದೇಶಕ್ಕೆ ಕಾಂಗ್ರೆಸ್ ಅವಮಾನ
ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸರ್ಜಿ, “ವಿದ್ಯದೇಗುಲಗಳಲ್ಲಿ ಓದುವ ಮಕ್ಕಳೆಲ್ಲರೂ ಸಮಾನರು. ಹಾಗಾಗಿ ವಸ್ತ್ರ ಸಂಹಿತೆಯನ್ನು ಪಾಲಿಸಲಾಗುತ್ತಿದೆ. ಎಲ್ಲರೂ ಒಂದೇ ರೀತಿಯ ಸಮವಸ್ತ್ರ (Uniform) ಧರಿಸಬೇಕು ಎಂಬ ನಿಯಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕಾಂಗ್ರೆಸ್ ಸರ್ಕಾರ ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸಲು ನ್ಯಾಯಾಲಯದ ಆದೇಶವನ್ನೂ ಧಿಕ್ಕರಿಸುತ್ತಿದೆ.ದಾವಣಗೆರೆಯಲ್ಲಿ ನಡೆದ ಅಲ್ಪ ಚುನಾವಣಾ ಹಿನ್ನಡೆಗೆ ಪ್ರತಿಫಲವಾಗಿ ಈಗ ಹಿಜಾಬ್ ವಿಚಾರವನ್ನು ಮುನ್ನಲೆಗೆ ತಂದಿದೆ ಎಂದು ಕಿಡಿಕಾರಿದರು.
ವಿದ್ಯಾರ್ಥಿಗಳ ಮಧ್ಯೆ ದ್ವೇಷದ ವಿಷಬೀಜ
“ಶಾಲಾ ಆವರಣದಲ್ಲಿ ಮಕ್ಕಳ ಮೇಲೆ ಇಂತಹ ನಿರ್ಧಾರಗಳು ಎಂತಹ ಪರಿಣಾಮ ಬೀರಬಹುದು ಎಂದು ಹೇಳಿದರು. ಮುಸ್ಲಿಂ ಹೆಣ್ಣುಮಕ್ಕಳಲ್ಲೇ ಕೆಲವರು ಹಿಜಾಬ್ ಧರಿಸುತ್ತಾರೆ, ಕೆಲವರು ಧರಿಸುವುದಿಲ್ಲ. ಇದರಿಂದ ಸ್ನೇಹಿತರ ನಡುವೆ ಈ ತಾರತಮ್ಯ ಉಂಟಾಗುವುದಿಲ್ಲವೇ ನಾವೇ ಮಕ್ಕಳನ್ನು ಬೇರ್ಪಡಿಸಿದ ಹಾಗೆ ಅಲ್ಲವೇ? ಕಾಂಗ್ರೆಸ್ ಮುಸಲ್ಮಾನರ ಓಲೈಕೆಗಾಗಿ ವಿದ್ಯಾರ್ಥಿಗಳ ಮಧ್ಯೆ ದ್ವೇಷ ಬಿತ್ತುತ್ತಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹೋರಾಟದ ಎಚ್ಚರಿಕೆ
ಸರ್ಕಾರದ ನಡೆಗೆ ಸವಾಲು ಹಾಕಿದ ಅವರು, “ಒಬ್ಬೊಬ್ಬರು ಒಂದೊಂದು ಧರ್ಮದ ಸಂಕೇತಗಳನ್ನು ಹಾಕಿಕೊಂಡು ಬರಲು ಅವಕಾಶ ಕೊಡುವುದಾದರೆ, ಮುಂದೆ ಎಲ್ಲರೂ ಹಿಜಾಬ್, ಕೇಸರಿ ಶಾಲು, ಪೇಟ ಹೀಗೆ ತಮಗೆ ಇಷ್ಟವಾದ ಧಿರಿಸುಗಳನ್ನು ಧರಿಸಿ ಬರಬಹುದು. ಇದು ಶೈಕ್ಷಣಿಕ ಶಿಸ್ತನ್ನು ಹಾಳು ಮಾಡುವುದಲ್ಲದೆ ಸಮಾಜಸ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ. ಕಾಂಗ್ರೆಸ್‌ನ ಈ ನಡೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಇದರ ವಿರುದ್ಧ ಹೋರಾಟ ನಡೆಸುತ್ತೇವೆ.” ಎಂದು ಎಚ್ಚರಿಸಿದರು.
#DrDhananjaySarji #Shimoga #HijabControversy #CongressPolitics #BJPKarnataka #UniformCivilCode #KarnatakaNews #FreedomTV #EducationSystem #BreakingNews




