ಸುವೇಂದು ಸಂಪುಟ ವಿಸ್ತರಣೆ – 35 ಶಾಸಕರಿಂದ ಪ್ರಮಾಣ ವಚನ ಸ್ವೀಕಾರ!
Suvendu Adhikari cabinet extension for second time

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅವರು ಅಧಿಕಾರ ವಹಿಸಿಕೊಂಡ ಮೂರು ವಾರಗಳ ಬಳಿಕ ಇಂದು ತಮ್ಮ ಸಚಿವ ಸಂಪುಟವನ್ನು ಬೃಹತ್ ಮಟ್ಟದಲ್ಲಿ ವಿಸ್ತರಣೆ ಮಾಡಿದ್ದಾರೆ. ಇಂದು ನಡೆದ ಮಹತ್ವದ ರಾಜಕೀಯ ಪ್ರಕ್ರಿಯೆಯಲ್ಲಿ ಬರೋಬರಿ 35 ಮಂದಿ ಬಿಜೆಪಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

2ನೇ ಹಂತದ ಸಂಪುಟ ವಿಸ್ತರಣೆ!
ಕಳೆದ ಮೇ 9 ರಂದು ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಮೂರು ವಾರಗಳ ಬಳಿಕ ಕೋಲ್ಕತ್ತಾದ ಲೋಕಭವನದಲ್ಲಿ ಅದ್ಧೂರಿ ಪ್ರಮಾಣ ಸ್ವೀಕಾರ ಸಮಾರಂಭ ನಡೆದಿದ್ದು, ರಾಜ್ಯಪಾಲ ಆರ್.ಎನ್. ರವಿ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ರಹಸ್ಯದೀಕ್ಷೆಯ ಪ್ರಮಾಣ ವಚನ ಬೋಧಿಸಿದರು. ಭಾರತದ ಸಂವಿಧಾನದ ವಿಧಿ 164(1ಎ) ಪ್ರಕಾರ ಪಶ್ಚಿಮ ಬಂಗಾಳವು ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 44 ಸಚಿವರನ್ನು ಹೊಂದಲು ಅವಕಾಶವಿದೆ. ಇಂದಿನ ವಿಸ್ತರಣೆಯೊಂದಿಗೆ ಸುವೇಂದು ಅಧಿಕಾರಿ ಸಂಪುಟದ ಒಟ್ಟು ಸಚಿವರ ಬಲ 41ಕ್ಕೆ ಏರಿಕೆಯಾಗಿದೆ.
ಸಚಿವ ಸಂಪುಟಕ್ಕೆ ಸೇರಿದ ಪ್ರಮುಖ ನಾಯಕರು!
ಮೊದಲ ಹಂತದಲ್ಲಿ ಸಿಎಂ ಸುವೇಂದು ಅಧಿಕಾರಿ ಅವರೊಂದಿಗೆ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ನಿಸಿತ್ ಪ್ರಾಮಾಣಿಕ್, ಅಶೋಕ್ ಕೀರ್ತಾನಿಯಾ ಮತ್ತು ಕ್ಷುದಿರಾಮ್ ತುಡು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದು 2ನೇ ಹಂತದಲ್ಲಿ ಸಂಪುಟ ಸೇರಿದ ಪ್ರಮುಖರ ಪಟ್ಟಿ ಇಲ್ಲಿದೆ.
| ಕ್ರ.ಸಂ. | ಸಚಿವರ ಹೆಸರು | ಹುದ್ದೆ / ಸಚಿವ ಸ್ಥಾನದ ದರ್ಜೆ |
| 1 | ಅರ್ಜುನ್ ಸಿಂಗ್ | ಕ್ಯಾಬಿನೆಟ್ ಸಚಿವರು |
| 2 | ತಪಸ್ ರಾಯ್ | ಕ್ಯಾಬಿನೆಟ್ ಸಚಿವರು |
| 3 | ಸಾರದ್ವತ್ ಮುಖರ್ಜಿ | ಕ್ಯಾಬಿನೆಟ್ ಸಚಿವರು |
| 4 | ಜಗನ್ನಾಥ್ ಚಟ್ಟೋಪಾಧ್ಯಾಯ | ಕ್ಯಾಬಿನೆಟ್ ಸಚಿವರು |
| 5 | ಶಂಕರ್ ಘೋಷ್ | ಕ್ಯಾಬಿನೆಟ್ ಸಚಿವರು |
| 6 | ಸ್ವಪನ್ ದಾಸ್ಗುಪ್ತಾ | ಕ್ಯಾಬಿನೆಟ್ ಸಚಿವರು |
| 7 | ದೂಧ್ ಕುಮಾರ್ ಮೊಂಡಲ್ | ಕ್ಯಾಬಿನೆಟ್ ಸಚಿವರು |
| 8 | ದೀಪಕ್ ಬರ್ಮನ್ | ಕ್ಯಾಬಿನೆಟ್ ಸಚಿವರು |
| 9 | ಮನೋಜ್ ಒರಾನ್ | ಕ್ಯಾಬಿನೆಟ್ ಸಚಿವರು |
| 10 | ಗೌರಿ ಶಂಕರ್ ಘೋಷ್ | ಕ್ಯಾಬಿನೆಟ್ ಸಚಿವರು |
| 11 | ರಾಜೇಶ್ ಮಹಾತ | ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) |
| 12 | ಇಂದ್ರಾನಿಲ್ ಖಾನ್ | ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) |
| 13 | ಮಾಲತಿ ರಾವ ರಾಯ್ | ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) |
| 14 | ಸಂತಾನು ಪ್ರಮಾಣಿಕ್ | ರಾಜ್ಯ ಸಚಿವರು |
| 15 | ಪೂರ್ಣಿಮಾ ಚಕ್ರವರ್ತಿ | ರಾಜ್ಯ ಸಚಿವರು |
| 16 | ಉಮೇಶ್ ರೈ | ರಾಜ್ಯ ಸಚಿವರು |
| 17 | ಜೋಯೆಲ್ ಮುರ್ಮು | ರಾಜ್ಯ ಸಚಿವರು |
| 18 | ಅಶೋಕ್ ದಿಂಡಾ | ರಾಜ್ಯ ಸಚಿವರು |
| 19 | ಆನಂದಮೋಯ್ ಬರ್ಮನ್ | ರಾಜ್ಯ ಸಚಿವರು |
| 20 | ಕೌಶಿಕ್ ಚೌಧರಿ | ರಾಜ್ಯ ಸಚಿವರು |
| 21 | ಗಾರ್ಗಿ ದಾಸ್ ಘೋಷ್ | ರಾಜ್ಯ ಸಚಿವರು |
| 22 | ಭಾಸ್ಕರ್ ಭಟ್ಟಾಚಾರ್ಯ | ರಾಜ್ಯ ಸಚಿವರು |
| 23 | ದಿಬಾಕರ್ ಘರಾಮಿ | ರಾಜ್ಯ ಸಚಿವರು |
| 24 | ಸುಮನಾ ಸರ್ಕಾರ್ | ರಾಜ್ಯ ಸಚಿವರು |
ಬಂಗಾಳದಲ್ಲಿ ಬಿಜೆಪಿ ಭದ್ರಕೋಟೆ!
ಬಂಗಾಳದ ಇತಿಹಾಸದಲ್ಲೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ಬ್ರೇಕ್ ಹಾಕಿ ಅಧಿಕಾರ ಹಿಡಿದಿರುವ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ, ಇದೀಗ ಪ್ರಾದೇಶಿಕ ಮತ್ತು ಜಾತೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಅರ್ಹರಿಗೆ ಸಚಿವ ಸ್ಥಾನ ನೀಡಿದೆ. ಎಲ್ಲಾ ವರ್ಗದ ನಾಯಕರಿಗೂ ಸಂಪುಟದಲ್ಲಿ ಆದ್ಯತೆ ನೀಡಲಾಗಿದ್ದು, ಹೊಸ ಸಚಿವರ ಸೇರ್ಪಡೆಯು ಬಂಗಾಳದಲ್ಲಿ ಬಿಜೆಪಿ ಆಡಳಿತವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
#FreedomTV #SuvenduAdhikari #WestBengal #CabinetExpansion #BengalBJP #Kolkata #GovernorRNRavi #WestBengalPolitics #NewMinisters #BJPGOVT #ConstitutionalArticle164 #BreakingNewsಕನ್ನಡ #PoliticalUpdates




