Freedom TVರಾಜಕೀಯ

ರಾಜ್ಯಪಾಲರ ಕಚೇರಿ RSS ಅಡ್ಡ- ಪ್ರಿಯಾಂಕ್ ಖರ್ಗೆ ಕಟು ಟೀಕೆ!

ಕಲಬುರಗಿ: ಸದಾ ಹರಿತವಾದ ಮಾತುಗಳ ಮೂಲಕ ಸುದ್ದಿಯಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇಂದು ಕಲಬುರಗಿಯಲ್ಲಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಬಿಎಸ್ ವೈ ಅಭಿನಂದನಾ ಸಮಾರಂಭ, ರಾಜ್ಯಪಾಲರ ನಡೆ ಹಾಗೂ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಕುರಿತು ಪ್ರಿಯಾಂಕ್ ಖರ್ಗೆ ನೀಡಿದ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.
ಬಿಎಸ್ ವೈ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರೇ ವಿರೋಧಿಗಳು!
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಅಭಿನಂದನಾ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೆ, ಸ್ವತಃ ಬಿಜೆಪಿ ಶಾಸಕರೇ ಈ ಕಾರ್ಯಕ್ರಮದ ಬಗ್ಗೆ ಆಕ್ಷೇಪ ಎತ್ತುತ್ತಿದ್ದಾರೆ. ಬಿಎಸ್ ವೈ ಮೇಲೆ ಕೇಸ್ ಇದೆ ಎಂದು ಅವರದ್ದೇ ಪಕ್ಷದವರು ಹೇಳುತ್ತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ಆಕ್ಷೇಪವಿಲ್ಲ,” ಎಂದು ವ್ಯಂಗ್ಯವಾಡಿದರು.
ತಮಿಳುನಾಡಿನಲ್ಲಿ ಕಾಂಗ್ರೆಸ್ ಸಚಿವರು ಭಿಕ್ಷೆ ಬೇಡುತ್ತಿದ್ದಾರೆ ಎಂಬ ಎ. ನಾರಾಯಣಸ್ವಾಮಿ ಅವರ ಹೇಳಿಕೆಗೆ ನಾರಾಯಣಸ್ವಾಮಿಗೆ ಮೊದಲು ಗ್ರಾಮ ಪಂಚಾಯತ್ ಗೆಲ್ಲಿ ನಂತರ ನಿಮ್ಮ ವರಸೆ ತೋರಿಸಿ
ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಉತ್ತರಿಸಿದರು.”ಕೇವಲ ಆರ್‌ಎಸ್ಎಸ್ ಚಡ್ಡಿ ಹೊತ್ತುಕೊಂಡಿದ್ದಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿದೆ. ಇಂತವರಿಂದ ನಾವು ಪಾಠ ಕಲಿಯಬೇಕಿಲ್ಲ.”

“ತಮಿಳುನಾಡು, ಕೇರಳ ಮತ್ತು ಆಂಧ್ರದಲ್ಲಿ ಬಿಜೆಪಿ ಪರಿಸ್ಥಿತಿ ಏನಾಗಿದೆ ಎಂದು ನೋಡಿಕೊಳ್ಳಲಿ. ಅಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತಲೂ ಹೀನಾಯವಾಗಿ ಬಿಜೆಪಿ ಸೋಲಲಿದೆ,” ಎಂದು ಭವಿಷ್ಯ ನುಡಿದರು.
“ರಾಜ್ಯಪಾಲರ ಕಚೇರಿ ಸಂಪೂರ್ಣ RSS ಮಯವಾಗುತ್ತಿದೆ. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಅಧಿಕಾರ ಸ್ವೀಕಾರಕ್ಕೆ ರಾಜ್ಯಪಾಲರು ವಿಳಂಬ ಮಾಡುತ್ತಿರುವ ಬಗ್ಗೆ ಕಿಡಿಕಾರಿದ ಖರ್ಗೆ, ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು.
“ಕರ್ನಾಟಕದಲ್ಲಿ ಹಿಂದೆ ಬಿಎಸ್ ವೈಗೆ ಅವಕಾಶ ನೀಡಿದ ರಾಜ್ಯಪಾಲರು, ಈಗ ತಮಿಳುನಾಡಿನಲ್ಲಿ ಯಾಕೆ ಅನುಮತಿ ನೀಡುತ್ತಿಲ್ಲ?””ರಾಜ್ಯಪಾಲರ ಮನೆಯಲ್ಲಿ ಬಹುಮತ ಪ್ರದರ್ಶಿಸಬೇಕೆ? ಇಂದು ದೇಶದ ಹಲವು ರಾಜ್ಯಪಾಲರ ಕಚೇರಿಗಳು ಆರ್‌ಎಸ್ಎಸ್ ಕಚೇರಿಗಳಂತೆ ಬದಲಾಗುತ್ತಿವೆ.”
“ಒಂದು ವೇಳೆ ಇಸಿಐ, ಸಿಬಿಐ ಮತ್ತು ಇಡಿ ಸಂಸ್ಥೆಗಳು ಪಾರದರ್ಶಕವಾಗಿ ಕೆಲಸ ಮಾಡಿದರೆ ಬಿಜೆಪಿ ಅಸ್ತಿತ್ವವೇ ಇಲ್ಲದಂತಾಗುತ್ತದೆ,” ಎಂದರು.
ಕೇರಳ ಕಾಂಗ್ರೆಸ್‌ನಲ್ಲಿ ಯಾವುದೇ ಕಗ್ಗಂಟಿಲ್ಲ!ಕೇರಳ ಕಾಂಗ್ರೆಸ್ ನಾಯಕತ್ವದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಕೇರಳದಲ್ಲಿ ಯಾವುದೇ ಗೊಂದಲವಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಫಲಿತಾಂಶ ಬಂದು ಕೇವಲ ಮೂರು ದಿನವಾಗಿದೆ ಅಷ್ಟೇ. ಹೈಕಮಾಂಡ್ ಶೀಘ್ರವೇ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ,” ಎಂದು ಸ್ಪಷ್ಟಪಡಿಸಿದರು.

FreedomTV #PriyankKharge #Kalaburagi #BJPvsCongress #RSS #BSY #PoliticalWar #KarnatakaPolitics #TamilNaduPolitics

Comments (0)

Your email address will not be published. Required fields are marked *

Back to top button