ರಾಜಕೀಯ

ಪಂಜಾಬ್ ಕೈಗಾರಿಕಾ ಸಚಿವ ಸಂಜಯ್ ಅರೋರಾ ಬಂಧನ

Industry minister Sanjay Arrest

ನೂರು ಕೋಟಿ ಮೊಬೈಲ್ ಹಗರಣದ ಕರಾಳ ಮುಖ ಬಯಲು!

ಚಂಡೀಗಢ: ಪಂಜಾಬ್ ರಾಜಕಾರಣದಲ್ಲಿ ಭಾರಿ ಸಂಚಲನ ಉಂಟಾಗಿದೆ. ಆಮ್ ಆದ್ಮಿ ಪಕ್ಷದ (AAP) ಹಿರಿಯ ನಾಯಕ ಹಾಗೂ ಪಂಜಾಬ್‌ನ ಕೈಗಾರಿಕಾ ಸಚಿವ ಸಂಜೀವ್ ಅರೋರಾ ಅವರನ್ನು ಜಾರಿ ನಿರ್ದೇಶನಾಲಯ (ED) ಇಂದು ಅಧಿಕೃತವಾಗಿ ಬಂಧಿಸಿದೆ.ಚಂಡೀಗಢದ ಸೆಕ್ಟರ್ 2 ರಲ್ಲಿರುವ ಅವರ ನಿವಾಸದ ಮೇಲೆ ಇಂದು ಮುಂಜಾನೆಯಿಂದಲೇ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಸುಮಾರು 10 ಗಂಟೆಗಳ ಕಾಲ ದೀರ್ಘ ವಿಚಾರಣೆ ನಡೆಸಿದ ನಂತರ ಅರೋರಾ ಅವರನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಕೇಸ್?
ಮೂಲಗಳ ಪ್ರಕಾರ, ಈ ಬಂಧನವು ಸುಮಾರು 100 ಕೋಟಿ ರೂಪಾಯಿಗಳ ನಕಲಿ ಜಿಎಸ್‌ಟಿ (GST) ಹಗರಣ ಹಾಗೂ ಹಣ ವರ್ಗಾವಣೆಗೆ ಸಂಬಂಧಿಸಿದೆ.ನಕಲಿ ಬಿಲ್ ಸೃಷ್ಟಿ: ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳ ಹೆಸರಿನಲ್ಲಿ ಮೊಬೈಲ್ ಖರೀದಿಸಿದಂತೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಜಿಎಸ್‌ಟಿ ರೀಫಂಡ್ ಪಡೆಯಲಾಗಿದೆ ಎಂಬ ದೊಡಡ ಆರೋಪ ಸಂಜಯ್ ಅರೋರಾ ಮೇಲಿದೆ.

ದುಬೈ ಲಿಂಕ್: ಈ ಹಗರಣದ ಮೂಲಕ ಬಂದ ಹಣವನ್ನು ದುಬೈಗೆ ವರ್ಗಾಯಿಸಿ, ಅಲ್ಲಿಂದ ಮತ್ತೆ ಭಾರತಕ್ಕೆ ಅಕ್ರಮವಾಗಿ ತರಿಸಲಾಗಿದೆ (Round Tripping) ಎಂದು ಇಡಿ ಶಂಕಿಸಿದೆ. ಅರೋರಾ ಅವರಿಗೆ ಸೇರಿದ ‘ಹ್ಯಾಂಪ್ಟನ್ ಸ್ಕೈ ರಿಯಾಲ್ಟಿ’ ಕಂಪನಿಯ ಮೂಲಕ ಕೈಗಾರಿಕಾ ಭೂಮಿಯನ್ನು ವಸತಿ ಉದ್ದೇಶಕ್ಕೆ ಅಕ್ರಮವಾಗಿ ಬಳಸಿದ ಭೂಹಗರಣ ಆರೋಪವೂ ಇವರ ಮೇಲಿದೆ.

ನಗರಗಳ ಮೇಲೆ ಏಕಕಾಲಕ್ಕೆ ದಾಳಿ:ಸಂಜೀವ್ ಅರೋರಾ ಅವರ ನಿವಾಸ ಮಾತ್ರವಲ್ಲದೆ, ಅವರಿಗೆ ಸಂಬಂಧಿಸಿದ ಚಂಡೀಗಢ, ಲುಧಿಯಾನ, ಜಲಂಧರ್ ಮತ್ತು ಗುರುಗ್ರಾಮ್ ಸೇರಿದಂತೆ ಹಲವು ನಗರಗಳ ಕಚೇರಿಗಳ ಮೇಲೆ ಇಡಿ ಏಕಕಾಲಕ್ಕೆ ದಾಳಿ ನಡೆಸಿದೆ. ಸಚಿವರ ಕುಟುಂಬದ ಸದಸ್ಯರು ಹಾಗೂ ಅವರ ಕಂಪನಿಯ ಪ್ರಮುಖ ಅಧಿಕಾರಿಗಳೂ ಇಡಿ ತನಿಖಾ ವ್ಯಾಪ್ತಿಯಲ್ಲಿದ್ದಾರೆ.

ರಾಜಕೀಯ ಸಂಘರ್ಷ: ಎಎಪಿ ಆಕ್ರೋಶ
ಸಚಿವ ಸಂಜೀವ್ ಅರೋರಾ ಬಂಧನವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರತಿಕ್ರಿಯಿಸಿ, “ಇದು ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ. ಕಳೆದ ಒಂದು ತಿಂಗಳಲ್ಲಿ ಇದು ಎರಡನೇ ದಾಳಿಯಾಗಿದ್ದು, ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಕಿಡಿಕಾರಿದ್ದಾರೆ.

ಈ ಹಿಂದೆ ಸಂಜೀವ್ ಅರೋರಾ ಅವರು ರಾಜ್ಯಸಭಾ ಸದಸ್ಯರಾಗಿದ್ದಾಗಲೂ ಇಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಕ್ಯಾಬಿನೆಟ್ ಮಂತ್ರಿಯಾಗಿರುವಾಗಲೇ ಬಂಧನಕ್ಕೊಳಗಾಗಿರುವುದು ಪಂಜಾಬ್ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

#SanjeevArora #EDArrest #PunjabNews #AAP #MoneyLaundering #GSTFraud #Chandigarh #FreedomTV #BreakingNews #PunjabPolitics #BhagwantMann

Comments (0)

Your email address will not be published. Required fields are marked *

Back to top button