ಕ್ರೈಂ ಸ್ಟೋರಿರಾಜಕೀಯ

ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರನ ವಿರುದ್ಧ ಪೋಕ್ಸೋ ಕೇಸ್

Bandi Sanjay son in Pocso

ಸುಲಿಗೆಯ ಪ್ರತಿ ದೂರು ನೀಡಿದ ಭಾಗೀರಥ್!

ಹೈದರಾಬಾದ್: ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಭಾಗೀರಥ್ ವಿರುದ್ಧ ಹೈದರಾಬಾದ್‌ನಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ. 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಭಾಗೀರಥ್ ವಿರುದ್ಧ ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ಏನಿದು ಪ್ರಕರಣ?
ಪ್ರಕರಣದನ್ವಯ ಭಾಗೀರಥ್ ಹಾಗೂ ಸಂತ್ರಸ್ತ ಬಾಲಕಿ ಕಳೆದ ಏಳೆಂಟು ತಿಂಗಳಿನಿಂದ ಸ್ನೇಹ ಹೊಂದಿದ್ದರು. ಈ ವೇಳೆ ಭಾಗೀರಥ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಬಾಲಕಿಯ ವೈದ್ಯಕೀಯ ಪರೀಕ್ಷೆ ಮತ್ತು ಹೇಳಿಕೆ ದಾಖಲೆ ಪ್ರಕ್ರಿಯೆ ಬಾಕಿ ಇದೆ.

ಹಣಕ್ಕಾಗಿ ಸುಲಿಗೆ ಬೆದರಿಕೆ: ಪ್ರತಿ ದೂರು ನೀಡಿದ ಸಚಿವರ ಪುತ್ರ
ಈ ಎಲ್ಲಾ ಆರೋಪಗಳನ್ನು ಬಂಡಿ ಸಂಜಯ್ ಪುತ್ರ ಭಾಗೀರಥ್ ಸಾರಾಸಗಟಾಗಿ ನಿರಾಕರಿಸಿದ್ದಾರೆ. ಇದು ವ್ಯವಸ್ಥಿತ ಸುಲಿಗೆಯ ಸಂಚು ಎಂದು ಆರೋಪಿಸಿ ಅವರು ಕರೀಂನಗರ ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ. ಅವರ ದೂರಿನ ಅಂಶಗಳು ಈ ರೀತಿ ಇವೆ. ಸಾಮಾನ್ಯ ಸ್ನೇಹಿತರ ಮೂಲಕ ಬಾಲಕಿಯ ಪರಿಚಯವಾಗಿತ್ತು.ನಂತರ ಪರಿಚಯ ಸ್ನೇಹವಾಗಿತ್ತು. ಎರಡೂ ಕುಟುಂಬಗಳು ಹಲವು ಬಾರಿ ಪ್ರಸಿದ್ಧ ದೇವಾಲಯಗಳಿಗೆ ಪ್ರವಾಸ ಹೋಗಿದ್ದವು.ಆದರೆ ಬಾಲಕಿಯ ಕುಟುಂಬದವರು ತನ್ನ ಮಗಳನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದರು.ಇದಕ್ಕೆ ಒಪ್ಪದಿದ್ದಾಗ ಕ್ರಿಮಿನಲ್ ಕೇಸ್ ಹಾಕುವ ಬೆದರಿಕೆ ಹಾಕಿದ್ದರು.

5 ಕೋಟಿ ರೂ.ಬೇಡಿಕೆ: ಆರಂಭದಲ್ಲಿ 50,000 ರೂ. ಹಣ ಪಡೆದಿದ್ದ ಬಾಲಕಿಯ ಕುಟುಂಬ, ನಂತರ ಬರೋಬ್ಬರಿ 5 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದೆ. ಹಣ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಾಲಕಿಯ ತಾಯಿ ಬೆದರಿಸಿದ್ದಾರೆ ಎಂದು ಭಾಗೀರಥ್ ದೂರಿದ್ದಾರೆ.

ಸದ್ಯ ಎರಡು ಕಡೆಗಳಿಂದಲೂ ದೂರು-ಪ್ರತಿ ದೂರುಗಳು ದಾಖಲಾಗಿವೆ.ಕೇಂದ್ರ ಸಚಿವರ ಪುತ್ರನ ಮೇಲೆ ಪೋಕ್ಸೋ ಕೇಸ್ ದಾಖಲಾಗಿರುವುದು ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಸದ್ಯಕ್ಕೆ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು,ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು ಸತ್ಯಾಸತ್ಯತೆ ಹೊರಬರಬೇಕಿದೆ.

#BandiSanjay #Bhagirath #POCSO #HyderabadPolice #BreakingNews #CrimeNews #FreedomTV #TelanganaPolitics #CentralMinister #FIR #Cyberabad

Comments (0)

Your email address will not be published. Required fields are marked *

Back to top button