bengaluruರಾಜಕೀಯ

ಡಿಕೆಶಿ ಸಂಪುಟ ಸೇರಲು ಹಿರಿಯರ ಕಸರತ್ತು, ಕಿರಿಯರ ಡಿಮ್ಯಾಂಡು!

Senior ministers fight for ministership again and new mlas fight for Ministership too

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಬೆನ್ನಲ್ಲೇ, ಈಗ ನೂತನ ಮುಖ್ಯಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದ ಹೊಸ ಸಚಿವ ಸಂಪುಟ ಸೇರಲು ಕಾಂಗ್ರೆಸ್ ಪಾಳಯದಲ್ಲಿ ಭಾರಿ ಬೆಳವಣಿಗೆಯಾಗಿದೆ. ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಸಚಿವರುಗಳೇ ನೂತನ ಸಂಪುಟದಲ್ಲೂ ಮುಂದುವರಿಯುವ ತೀವ್ರ ಆಕಾಂಕ್ಷೆ ಹೊಂದಿದ್ದು, ತಮ್ಮಸಚಿವ ಸ್ಥಾನಗಳನ್ನು ಮತ್ತೆ ಪಡೆದುಕೊಳ್ಳಲು ಹಿರಿಯ ಶಾಸಕರುಗಳ ದಂಡೇ ಸಜ್ಜಾಗಿದೆ.

ಮರುಸೇರ್ಪಡೆಗಾಗಿ ಸರತಿಯಲ್ಲಿ ಲೀಡರ್ಸ್!
ಪಕ್ಷದ ಹೈಕಮಾಂಡ್ ಹಾಗೂ ನೂತನ ಸಿಎಂ ಡಿ.ಕೆ. ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿದರೆ, ಹಳೆಯ ಸಂಪುಟದಲ್ಲಿದ್ದ ಈ ಕೆಳಗಿನ ಹಿರಿಯ ನಾಯಕರು ಮರುಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಕ್ರಮ ಸಂಖ್ಯೆಹಿರಿಯ ನಾಯಕರ ಹೆಸರು
1ಕೃಷ್ಣ ಭೈರೇಗೌಡ
2ಪ್ರಿಯಾಂಕ್ ಖರ್ಗೆ
3ಸತೀಶ್ ಜಾರಕಿಹೊಳಿ
4ಕೆ.ಜೆ. ಜಾರ್ಜ್
5ಈಶ್ವರ್ ಖಂಡ್ರೆ
6ಎಂ.ಬಿ. ಪಾಟೀಲ್
7ಡಾ. ಜಿ. ಪರಮೇಶ್ವರ್
8ಎಚ್.ಕೆ. ಪಾಟೀಲ್
9ಶಿವರಾಜ ತಂಗಡಗಿ
10ಕೆ.ಎಚ್. ಮುನಿಯಪ್ಪ
11ಮಂಕಾಳ್ ವೈದ್ಯ
12ಸಂತೋಷ್ ಲಾಡ್
13ರಾಮಲಿಂಗಾರೆಡ್ಡಿ

ಇತ್ತ ಹಿರಿಯ ನಾಯಕುರ ತಮ್ಮ ಸ್ಥಾನಗಳಿಗಾಗಿ ಪ್ರಭಾವ ಬೀರುತ್ತಿದ್ದರೆ ಅತ್ತ ಕೆಲವು ಹೊಸ ಮುಖಗಳು ಸಚಿವ ಸ್ಥಾನಗಳಿಗಾಗಿ ಇನ್ನಿಲ್ಲದ ಸರ್ಕಸ್​ ಮಾಡುತ್ತಿವೆ.

ಕೋಲಾರದಿಂದ ಸಚಿವ ಸ್ಥಾನಕ್ಕೆ ಜಂಗಿಕುಸ್ತಿ


ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಂಟಿ ಪತ್ರ ಬರೆಯುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಕೋಲಾರ ಜಿಲ್ಲೆಯ ಮೂವರು ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 7 ಮಂದಿ ಜನಪ್ರತಿನಿಧಿಗಳು ಸಹಿ ಮಾಡಿರುವ ಪತ್ರವನ್ನು ಹೈಕಮಾಂಡ್‌ಗೆ ರವಾನಿಸಿದ್ದು, ಕೋಲಾರ ಜಿಲ್ಲೆಗೆ ಈ ಬಾರಿ ಕಡ್ಡಾಯವಾಗಿ 3 ಸಚಿವ ಸ್ಥಾನ ನೀಡಬೇಕೆಂದು ತೀವ್ರ ಒತ್ತಡ ಹೇರಿದ್ದಾರೆ.ಪತ್ರದಲ್ಲಿರುವ ಪ್ರಮುಖ ಬೇಡಿಕೆಗಳೆಂದರೆ ದಲಿತ ಕೋಟಾದ ಅಡಿಯಲ್ಲಿ ಬಂಗಾರಪೇಟೆಯ ಹಿರಿಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಸಾಮಾನ್ಯ ಜನಾಂಗದ ಕೋಟಾದಡಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಮತ್ತು ಕೊತ್ತೂರು ಮಂಜುನಾಥ್ ಅವರಿಗೆ ಸಚಿವ ಪಟ್ಟ ಕಟ್ಟಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಈ ಪ್ರಾದೇಶಿಕ ಮತ್ತು ಜಾತಿಸಮೀಕರಣದ ಪತ್ರವೀಗ ಹೈಕಮಾಂಡ್‌ಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

#FreedomTV #KarnatakaCabinetExpansion #DKShivakumarCabinet #CongressPolitics #MallikarjunKharge #KolarCongress #CabinetRace2026 #SeniorMLAs #KarnatakaPolitics #BreakingNews #BengaluruPolitics #CongressHighCommand #SNNarayanaswamy #KothurManjunath #KYNanjegowda #KarnatakaNews

Comments (0)

Your email address will not be published. Required fields are marked *

Back to top button