Wednesday, December 10, 2025
26.8 C
Bengaluru
Google search engine
LIVE
ಮನೆಮನರಂಜನೆಒಂದೇ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು..!

ಒಂದೇ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು..!

ಮೆಗಾಸ್ಟಾರ್ ಚಿರಂಜೀವಿ ತೆಲುಗಿನ ಲಿಜೆಂಡರಿ ನಟ ಇದೀಗ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಮತ್ತೊಬ್ಬ ತೆಲುಗಿನ ಸ್ಟಾರ್ ನಟ ಎಂಟ್ರಿ ಆಗಿದ್ದಾರೆ. ಸ್ಟಾರ್ ನಟರು ಒಟ್ಟಿಗೆ ಸಿನಿಮಾ ಮಾಡುವುದು ಅಪರೂಪ. ಅದರಲ್ಲೂ ಇಬ್ಬರು ಸೂಪರ್ ಸ್ಟಾರ್​​ಗಳು, ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟರಾಗಿದ್ದು, ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುವುದು ಅಪರೂಪ.
ಸ್ಟಾರ್​ ಡೈರೆಕ್ಟರ್​​ ರಾಜಮೌಳಿ ಅವರು ಜೂ. ಎನ್​​ಟಿಆರ್-ರಾಮ್ ಚರಣ್ ಅವರ ಜೊತೆಗೆ ಸಿನಿಮಾ ಮಾಡಿ ಅದ್ಭುತ ಯಶಸ್ಸು ಕಂಡರು. ಇದೀಗ ಮತ್ತೆ ಟಾಲಿವುಡ್​​ನ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ.
ತೆಲುಗಿನ ಹಿರಿಯ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ವಿಕ್ಟರಿ ವೆಂಕಟೇಶ್ ಅವರು ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾನಲ್ಲಿ ನಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ಈ ಇಬ್ಬರು ನಟರು ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿದ್ದು, ವೆಂಕಟೇಶ್ ಅವರದ್ದು, ಕೇವಲ ಅತಿಥಿ ಪಾತ್ರ ಆಗಿರುವುದಿಲ್ಲ ಬದಲಿಗೆ ಪರಿಪೂರ್ಣ ಪಾತ್ರವೇ ಆಗಿರುತ್ತದೆ ಎನ್ನಲಾಗುತ್ತಿದೆ.
ವೆಂಕಟೇಶ್ ಅವರು ಸಿನಿಮಾಕ್ಕೆ ಎಂಟ್ರಿ ಕೊಡುತ್ತಿರುವ ಬಗ್ಗೆ ಚಿತ್ರತಂಡ ವಿಡಿಯೋ ಒಂದನ್ನು ಹಂಚಿಕೊಂಡಿದೆ. ವಿಡಿಯೋನಲ್ಲಿ ಚಿರಂಜೀವಿ, ‘ವೆಲ್​​ಕಮ್ ವೆಂಕಿ ಮೈ ಬ್ರದರ್’ ಎಂದರೆ, ವೆಂಕಟೇಶ್ ಅವರು, ‘ಚಿರು ಸರ್, ಮೈ ಬಾಸ್’ ಎಂದು ಆಲಿಂಗಿಸಿಕೊಂಡಿದ್ದಾರೆ. ಇಬ್ಬರು ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ವೆಂಕಟೇಶ್ ಅವರು ಈ ಹಿಂದೆ ಪವನ್ ಕಲ್ಯಾಣ್ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಹಿಂದಿಯ ‘ಓಎಂಜಿ’ ಸಿನಿಮಾದ ತೆಲುಗು ರೀಮೇಕ್ ‘ಗೋಪಾಲ-ಗೋಪಾಲ’ನಲ್ಲಿ ಪವನ್ ಕಲ್ಯಾಣ್ ದೇವರ ಪಾತ್ರದಲ್ಲಿ, ವೆಂಕಟೇಶ್, ದೇವರ ಮೇಲೆ ಕೇಸು ಹಾಕಿದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಈಗ ವೆಂಕಟೇಶ್ ಅವರು ಚಿರಂಜೀವಿ ಜೊತೆಗೆ ನಟಿಸುತ್ತಿದ್ದಾರೆ. ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾನಲ್ಲಿ ನಯನತಾರಾ ನಾಯಕಿ ಆಗಿದ್ದು, ಸಿನಿಮಾ ಅನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಲಿದ್ದಾರೆ.
+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments