Tuesday, February 10, 2026
24.4 C
Bengaluru
Google search engine
LIVE
ಮನೆ#Exclusive Newsಜಾತಕ ಹೇಳೋ ಜ್ಯೋತಿಷಿ ಈಗ ಜೈಲಿನಲ್ಲಿ: ಸುಚಿತ್ರಾ-ಕಮಲಾಕರ್ ಆಡಿಯೋ ಲೀಕ್!

ಜಾತಕ ಹೇಳೋ ಜ್ಯೋತಿಷಿ ಈಗ ಜೈಲಿನಲ್ಲಿ: ಸುಚಿತ್ರಾ-ಕಮಲಾಕರ್ ಆಡಿಯೋ ಲೀಕ್!

ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ನಡುವಿನ ಆಡಿಯೋ ಸಂಭಾಷಣೆ ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಈ ಇಬ್ಬರೂ ಈಗಾಗಲೇ ಜೈಲು ಪಾಲಾಗಿದ್ದು, ಈ ವೈರಲ್ ಆಡಿಯೋ ಪ್ರಕರಣಕ್ಕೆ ಮತ್ತಷ್ಟು ಭೀಕರ ತಿರುವು ನೀಡಿದೆ.

ಈ ಇಬ್ಬರ ಅನೈತಿಕ ಸಂಬಂಧದ ಬಗ್ಗೆ ಅರಿವಿದ್ದ ಸುಚಿತ್ರಾ ಅವರ ಮಗಳು, ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದೇ ಈ ಎಲ್ಲಾ ಘಟನೆಗಳಿಗೆ ನಾಂದಿಯಾಗಿತ್ತು. ಈ ದೂರಿನಿಂದ ಆಕ್ರೋಶಗೊಂಡ ಸುಚಿತ್ರಾ, ಕಮಲಾಕರ್ ಭಟ್ ಮತ್ತು ಅವರ ಗ್ಯಾಂಗ್, ಸುಚಿತ್ರಾ ಅವರ ಪತಿ ಮಹೇಶ್ ಅವರ ಮನೆಗೆ ದಾಳಿ ನಡೆಸಿದ್ದರು. ಈ ವೇಳೆ ಗಲಾಟೆ ಬಿಡಿಸಲು ಬಂದ ಮಹೇಶ್ ಅವರ ಸಹೋದರ ವಸಂತ್ ನಾಯ್ಕ್ ಅವರನ್ನು ಚಾಕು ಇರಿದು ಕೊಲೆ ಮಾಡಲಾಗಿತ್ತು. ಸದ್ಯ ಕಮಲಾಕರ್ ಭಟ್, ಸುಚಿತ್ರಾ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ವೈರಲ್ ಆಡಿಯೋದಲ್ಲಿ ಇಬ್ಬರೂ ಮಕ್ಕಳ ಬಗ್ಗೆ ಆಡಿರುವ ಮಾತುಗಳು ವಿಕೃತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದ್ದು, “ಮಗಳು ಇಲ್ಲದಿದ್ದರೆ ನಮ್ಮ ಸುಖಕ್ಕೆ ಪಾರವೇ ಇಲ್ಲ” ಎನ್ನುವಂತಹ ಆತಂಕಕಾರಿ ಮಾತುಗಳು ಜನಸಾಮಾನ್ಯರ ಎದೆಯಲ್ಲಿ ನಡುಕ ಹುಟ್ಟಿಸಿವೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments